ಹೃದಯಾಘಾತದಿಂದ ಯೋಧ ಸಾವು

11 Jaggu 2
Published on

ಬೆಳಗಾವಿ: ರಜೆಗೆಂದು ಊರಿಗೆ ಬಂದಿದ್ದ ನಗರದ ಅನಗೋಳದ ಯೋಧ ಇಬ್ರಾಹಿಂ ದೇವಲಾಪುರ (37) ಹೃದಯಾಘಾತದಿಂದ ಮೃತಪಟ್ಟಿರುವ ಟನೆ ಗುರುವಾರ ನಡೆದಿದೆ. ಊರಿಗೆ ಬಂದಿದ್ದ ವೇಳೆ ಅನಗೋಳದ ಮಾರುಕಟ್ಟೆಗೆ ತೆರಳಿದ್ದಾಗ ಏಕಾಏಕಿ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ. ತಣ ಸ್ಥಳಿಯರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ. ಎದೆನೋವಿನಿಂದ ಯೋಧ ಕುಸಿದು ಬೀಳುತ್ತಿರುವ ದೃಶ್ಯ ಸಿಸಿಟಿವಿಯೊಂದರಲ್ಲಿ ಸೆರೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net