

ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ ಸೋಮವಾರ ಸಂಜೆ ತಮಿಳುನಾಡಿನ ಮಾದಪ್ಪನ ಭಕ್ತ್ತರೊಬ್ಬರು ಹೃದಯಾಘಾತದಿಂದ ಮೃತಟಪಟ್ಟಿದ್ದಾರೆ.
ತಮಿಳುನಾಡಿನ ಸೇಲಂ ಜಿಲ್ಲೆಯ ಹೋಮಲೂರು ಗ್ರಾಮದ ಚಿನ್ನತಂಬಿ(60) ಮೃತಪಟ್ಟವರು. ದೇವರ ದರ್ಶನಕ್ಕೆ ಚಿನ್ನತಂಬಿ ಒಬ್ಬರೇ ಆಗಮಿಸಿದ್ದರು. ಸಂಜೆ 5 ಗಂಟೆ ವೇಳೆಯಲ್ಲಿ ದೇಗುಲದ ರಾಜಗೋಪುರ ಮುಂಭಾಗ ಭಕ್ತರು ತಂಗುವ ಸ್ಥಳದ ಸಮೀಪದಲ್ಲಿರುವ ಕೊಳವೆ ನಲ್ಲಿಯಲ್ಲಿ ತಲೆಗೆ ನೀರು ಚಿಮುಕಿಸಿಕೊಳ್ಳುತ್ತಿದ್ದಾಗ ಇದ್ದಕ್ಕಿಂದ್ದಂತೆಯೇ ಕುಸಿದು ಬಿದ್ದಿದ್ದು, ಹೃದಯಘಾತ ಸಂಭವಿಸಿದೆ ಎನ್ನಲಾಗಿದೆ. ಈ ಬಗ್ಗೆ ಸ್ಥಳೀಯರು ಮಾಹಿತಿ ತಿಳಿಸಿದಾಗ ಸ್ಥಳಕ್ಕಾಗಮಿಸಿ ಪೊಲೀಸರು ಪರಿಶೀಲಿಸಿ ವಿಳಾಸವನ್ನು ಪತ್ತೆ ಹೆಚ್ಚಿ ಸಂಬಂಧಿಕರಿಗೆ ಮಾಹಿತಿ ತಿಳಿಸಿದರು. ಬಳಿಕ ಆಗಮಿಸಿದ ಕುಟುಂಬಸ್ಥರು ಮೃತದೇಹವನ್ನು ಗ್ರಾಮಕ್ಕೆ ಕೊಂಡೊಯ್ದರು.