ಹೃದಯಾಘಾತದಿಂದ ಮಹಿಳೆ ಸಾವು

Published on

ತುರುವೇಕೆರೆ: ತುಮಕೂರಿನಲ್ಲಿ ಆಯೋಜಿಸಿದ್ದ ಸಚಿವ ಕೆಎನ್​ ರಾಜಣ್ಣ ಅವರ ಅಮೃತ ಮಹೋತ್ಸವಕ್ಕೆ ತೆರಳಿದ್ದ ತಾಲೂಕಿನ ಕಸಬಾ ಹೋಬಳಿ ಸೀಗೆಹಳ್ಳಿಯ ಹಾಲು ಉತ್ಪಾದಕರ ಸಂದ ನಿರ್ದೇಶಕಿ ಸುನಂದಮ್ಮ(60) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕಾರ್ಯಕ್ರಮ ಮುಗಿಸಿ ಬಸ್​ನಲ್ಲಿ ಮರಳುವಾಗ ಹೃದಯಾಘಾತ ಸಂಭವಿಸಿದೆ. ತಕ್ಷಣ ಗುಬ್ಬಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸುವ ವೇಳೆಗಾಗಲೇ ಮಹಿಳೆ ಮೃತಪಟ್ಟಿದ್ದಾರೆ. ಮೃತರಿಗೆ ಪತಿ, ಪುತ್ರಿ ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net