ಹೃದಯಾಘಾತದಿಂದ ಬಿಡಿಎ ಅಧ್ಯಕ್ಷ ಬಾಬು ವಾಲಿ ಅಸ್ವಸ್ಥ

babu wali
Published on

ಬೀದರ್: ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ(ಬಿಡಿಎ) ಅಧ್ಯಕ್ಷ, ಬಿಜೆಪಿ ಹಿರಿಯ ಮುಖಂಡ ಬಾಬು ವಾಲಿ (೫೪) ಹೃದಯಾಘಾತದಿಂದ ಅಸ್ವಸ್ಥರಾಗಿದ್ದಾರೆ. ಭಾನುವಾರ ಬೆಳಗ್ಗೆ ಎದೆಯಲ್ಲಿ ದಿಢೀರ್ ನೋವು ಕಾಣಿಸಿ ಸುಸ್ತು ಎನಿಸಿದೆ. ಮನೆಯಿಂದ ತಾವೇ ಕಾರು ಓಡಿಸಿಕೊಂಡು ಗುದಗೆ ಆಸ್ಪತ್ರೆಗೆ ಆಗಮಿಸಿದ್ದಾರೆ. ಆಸ್ಪತ್ರೆ ಮುಖ್ಯಸ್ಥ ಡಾ.ಚಂದ್ರಕಾಂತ ಗುದಗೆ, ಹೃದ್ರೋಗ ತಜ್ಞ ಡಾ.ನಿತಿನ್ ಗುದಗೆ, ಡಾ.ಸಚಿನ್ ಗುದಗೆ ತಪಾಸಣೆ ನಡೆಸಿದ್ದಾರೆ. ಇಸಿಜಿ ಅಸಹಜವಾಗಿ ಬಂದಿದ್ದರಿಂದ ಕೂಡಲೇ ಎಂಜಿಯೋಗ್ರಾಫಿ ಮಾಡಲಾಗಿದ್ದು, ಹೃದಯಾಘಾತ ಆಗಿರುವುದು ಗೊತ್ತಾಗಿದೆ. ವೈದ್ಯರು ಬೈಪಾಸ್ ಸರ್ಜರಿಗೆ ಶಿಫಾರಸು ಮಾಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆರೋಗ್ಯ ಸ್ಥಿರವಾಗಿದೆ. ಸಕಾಲಕ್ಕೆ ಆಸ್ಪತ್ರೆಗೆ ಬಂದಿದ್ದರಿಂದ ಚಿಕಿತ್ಸೆಗೆ ಬೇಗ ಸ್ಪಂದಿಸಿದ್ದಾರೆ ಎಂದು ಡಾ.ಚಂದ್ರಕಾಂತ ಗುದಗೆ ವಿಜಯವಾಣಿಗೆ ತಿಳಿಸಿದರು. ಕೇಂದ್ರ ಸಚಿವ ಭಗವಂತ ಖೂಬಾ ಸೇರಿ ಅನೇಕ ಬಿಜೆಪಿ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ವಾಲಿ ಆರೋಗ್ಯ ವಿಚಾರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net