ಹೃದಯಾಘಾತದಿಂದ ಚಾಲಕ ಸಾವು

images
Published on

ಔರಾದ್: ಔರಾದ್ ಬಸ್ ಡಿಪೋ ಚಾಲಕ ಕಮ್ ನಿರ್ವಾಹಕ ಬಸವರಾಜ (53) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೂಲತಃ ಹುಮನಾಬಾದ್ ತಾಲೂಕಿನ ದುಬಲಗುಂಡಿ ಗ್ರಾಮದ ಬಸವರಾಜ ಗುರುವಾರ ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ಎದೆಯಲ್ಲಿ ನೋವು ಕಾಣಿಸಿಕೊಂಡಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ನಾಲ್ಕು ತಿಂಗಳಿಂದ ಅನಾರೋಗ್ಯದಿಂದ ರಜೆ ಮೇಲೆ ಇದ್ದ ಬಸವರಾಜ ಬುಧವಾರ ಕರ್ತವ್ಯಕ್ಕೆ ಹಾಜರಾಗಿದ್ದರು. ಗುರುವಾರ ಡಿಪೋದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅಸ್ವಸ್ಥರಾಗಿದ್ದಾರೆ. ಬಸವರಾಜ ಅವರಿಗೆ ಆರೋಗ್ಯ ಸಮಸ್ಯೆಗಳಿದ್ದರೂ ನಿತ್ಯ ಕರ್ತವ್ಯಕ್ಕೆ ಹುಮನಾಬಾದ್ನಿಂದ ಔರಾದ್ಗೆ ಹಾಜರಾಗಿ ಸಹಿ ಮಾಡುವಂತೆ ಘಟಕ ವ್ಯವಸ್ಥಾಪಕರು ಹೇಳಿ ಕಿರಕುಳ ನೀಡಿದ್ದ ಕಾರಣ ಈ ಘಟನೆ ನಡೆದಿದೆ. ಕೂಡಲೇ ಘಟಕದ ವ್ಯವಸ್ಥಾಪಕರನ್ನು ಅಮಾನತು ಮಾಡಬೇಕೆಂದು ಭಾರತೀಯ ಮಜ್ದೂರ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣಪತಿ ಸಕ್ರಪ್ಪನೋರ್ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net