ಹೃದಯಾಘಾತದಿಂದ ಕಿರುತರೆ ಕಲಾವಿದ ಪವನ್ ನಿಧನ

IMG-20230817-WA0212
Published on

ಕೆ.ಆರ್.ಪೇಟೆ: ತಾಲೂಕಿನ ಹರಿಹರಪುರ ಗ್ರಾಮದ ಪರಭಾಷೆಯ ಕಿರುತರೆ ಕಲಾವಿದ ಪವನ್(25) ಮುಂಬೈನಲ್ಲಿ ಗುರುವಾರ ಹೃದಯಾಘಾತದಿಂದ ನಿಧನರಾದರು.


ಗ್ರಾಮದ ನಾಗರಾಜು ಮತ್ತು ಸರಸ್ವತಿಯ ದಂಪತಿಯ ಪುತ್ರನಾದ ಪವನ್ ಮುಂಬೈನಲ್ಲಿ ವಾಸವಿದ್ದರು. ಹಿಂದಿ, ತಮಿಳು ಕಿರುತೆರೆ ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು. ನಟನೆಯಿಂದ ಜನಪ್ರಿಯತೆ ಪಡೆಯಲು ತನ್ನ ದೇಹ ಆಕರ್ಷಣೆಗಾಗಿ ಅತಿಯಾಗಿ ಮಾಡುತ್ತಿದ್ದ ವ್ಯಾಯಾಮವೇ ಹಠಾತ್ ಸಾವಿಗೆ ಕಾರಣ ಎನ್ನಲಾಗುತ್ತಿದೆ.


ಸದ್ಯ ಪವನ್ ಮೃತದೇಹ ಮುಂಬೈನ ಆಸ್ಪತ್ರೆಯಲ್ಲಿದ್ದು, ಮರಣೋತ್ತರ ಪರೀಕ್ಷೆ ನಂತರ ಶುಕ್ರವಾರ ಸ್ವಗ್ರಾಮ ಹರಿಹರಪುರದಲ್ಲಿರುವ ತೋಟದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net