

ಮೈಸೂರು: ಹಾಸನ ಜಿಲ್ಲೆಯ ಇಂಜಿನಿಯರ್‌ರೊಬ್ಬರು ಜಿಮ್‌ನಲ್ಲಿ ವರ್ಕ್ ಔಟ್ ಮಾಡುವ ಸಂದರ್ಭದಲ್ಲಿ ಹೃದಯಾಘಾತದಿಂದ ಇತ್ತೀಚೆಗೆ ಮೃತಪಟ್ಟಿದ್ದಾರೆ.
ಹಾಸನ ಜಿಲ್ಲೆ ಹೊಳೆನರಸೀಪುರ ಮೂಲದ, ನಗರದ ಗೋಕುಲಂ ನಿವಾಸಿ ಶ್ರೀಧರ್(51) ಮೃತರು.
ಕಳೆದ ಶನಿವಾರ ವಿಜಯನಗರದ ಒಂದನೇ ಹಂತದಲ್ಲಿರುವ ಜಿಮ್‌ನಲ್ಲಿ ಶ್ರೀಧರ್ ಅವರು ಥ್ರೆಡ್ ಮಿಲ್ ಮಾಡುವಾಗ ಏಕಾಏಕಿ ಕುಸಿದು ಬಿದ್ದರು. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು.
ಆದರೆ, ಅದಕ್ಕೂ ಮುನ್ನವೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದ ಶ್ರೀಧರ್ ಅವರ ಹೃದಯಕ್ಕೆ ಇತ್ತೀಚೆಗೆ ಸ್ಟಂಟ್ ಅಳವಡಿಕೆ ಮಾಡಲಾಗಿತ್ತು.