ಹೃದಯಕ್ಕೆ ಕುತ್ತು ತರುತ್ತಿರುವ ಜೀವನ ಶೈಲಿ

ctd 1......
Published on

ಚಿತ್ರದುರ್ಗ: ಚಿಕ್ಕಮಕ್ಕಳು,ಹದಿಹರೆಯದವರು ಈಚೆಗೆ ಹೃದಯಘಾತಕ್ಕೆ ಈಡಾಗುತ್ತಿರುವುದಕ್ಕೆ ಮುಖ್ಯ ಕಾರಣ ಬದಲಾಗಿರುವ ನಮ್ಮ ಜೀವನಶೈಲಿ,ಆ ಹಾರ ಪದ್ಧತಿ ಎಂದು ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್.ರವೀಂದ್ರನಾಥ್ ಹೇಳಿದರು. ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಶ್ರೀ ಮುರುಘಾಮಠದ ಅನುಭವ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಆರೋಗ್ಯಮೇಳದಲ್ಲಿ ಮಾತನಾಡಿ, ಮಾನಸಿಕ ಒತ್ತಡವೂ ಹೃದ್ರೋಗಕ್ಕೆ ಪ್ರಮುಖ ಕಾರಣವಾಗಿದೆ. ವ್ಯಾಯಾಮ ಮಾಡಬೇಕು,ಮನಸ್ಸಿನ ಒತ್ತಡ ಹಾಗೂ ಮೊಬೈಲ್ ಬಳಕೆ ಕಡಿಮೆ ಮಾಡಿ,ದಿನಕ್ಕೆ ಏಳು ಗಂಟೆ ನಿದ್ರೆ ಮಾಡಬೇಕೆಂದರು.

ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ,ಶರಣ ಸಂಸ್ಕೃತಿ ಉತ್ಸವದಲ್ಲಿ ಹಲವು ಸಮಾಜಮುಖಿ ಕಾರ‌್ಯಕ್ರಮಗಳನ್ನು ಶ್ರೀ ಮಠ ಕೈಗೆತ್ತಿ ಕೊಂಡಿರುವುದು ಸ್ವಾಗತಾರ್ಹವೆಂದರು. ಸಾನಿಧ್ಯ ವಹಿಸಿದ್ದ ಮುರುಘಾಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಶ್ರೀ ಬಸವಕುಮಾರ ಸ್ವಾ ಮೀಜಿ,ಬೆಂಗಳೂರಿನ ಮನಶಾಸ್ತ್ರಜ್ಞ ಡಾ. ಜಿ.ಸ್ವಾಮಿನಾಥ್,ಬಸವೇಶ್ವರ ವೈದ್ಯಕೀಯ ಕಾಲೇಜಿನ ಡೀನ್ ಡಾ.ಜಿ.ಪ್ರಶಾಂತ್ ಮಾತನಾಡಿದರು.

ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ,ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ,ಕುಡಾ ಅಧ್ಯಕ್ಷ ಎಂ.ಕೆ.ತಾಜ್‌ಪೀರ್,ಪಟೇಲ್ ಶಿವಕುಮಾರ್,ನಗರಸಭೆ ಮಾಜಿ ಅಧ್ಯಕ್ಷೆ ಸುನೀತಾಮಲ್ಲಿಕಾರ್ಜುನ, ಎಸ್.ವಿ.ನಾಗರಾಜಪ್ಪ,ಹರಗುರು ಚರಮೂರ್ತಿಗಳು ಇದ್ದರು. ಸಾಂಸ್ಕೃತಿಕ ಸಂಭ್ರಮದಲ್ಲಿ ಗಂಗಾವತಿ ಪ್ರಾಣೇಶ,ಬಸವರಾಜ ಮಾಮನಿ ಹಾಗೂ ನರಸಿಂಹ ಜೋಷಿ ಹಾಸ್ಯ ಸಂಗಮ ಕಾರ‌್ಯಕ್ರಮ ನಡೆಸಿ ಕೊಟ್ಟರು. ತೋಟ ಪ್ಪ ಉತ್ತಂಗಿ ಸಂಗಡಿಗರು ಪ್ರಾರ್ಥಿಸಿದರು. ಶ್ರೀ ಬಸವಮಹಾಂತ ಸ್ವಾಮೀಜಿ ಸ್ವಾಗತಿಸಿ,ವಿಶ್ವನಾಥ ನಿರೂಪಿಸಿದರು. ಬಾಪೂಜಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಬಸವ ಸಂಕುಲ ರೂಪಕ ನಡೆಸಿಕೊಟ್ಟರು.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net