ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿ ; ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಮೂವರು ರೋಗಿಗಳಿಗೆ ಚಿಕಿತ್ಸೆ

heart operation june 19
Published on

ತುಮಕೂರು : ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಇತ್ತೀಚೆಗೆ ಮೂವರು ರೋಗಿಗಳಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮಾಡುವ ಮೂಲಕ ಸಿದ್ಧಾರ್ಥ ಅಡ್ವಾನ್ಸ್‌ಡ್ ಹಾರ್ಟ್ ಸೆಂಟರ್ ಮುಖ್ಯಸ್ಥ ಡಾ.ತಮೀನ್ ಅಹಮದ್ ನೇತೃತ್ವದ ತಂಡ ಮತ್ತೊಂದು ಸಾಧನೆ ಮಾಡಿದೆ.

ಒಂದೇ ತೆರನಾದ ಹೃದಯ ಸಮಸ್ಯೆ ಎದುರಿಸುತ್ತಿದ್ದ ಇಬ್ಬರು ವ್ಯಕ್ತಿಗಳಿಗೆ ಭಿನ್ನ ವಾದರಿಯ ಶಸ್ತ್ರಚಿಕಿತ್ಸೆ ವಾಡಿದೆ, ಕರೊನಾ ಸೋಂಕಿತರಾಗಿ ಹೃದಯಾಘಾತಕ್ಕೆ ಒಳಗಾಗಿದ್ದ ಪಶ್ಚಿಮ ಬಂಗಾಳದ ರೋಗಿಯೊಬ್ಬರಿಗೆ ಓಪನ್ ಹಾರ್ಟ್ ಸರ್ಜರಿ ಮೂಲಕ ಮರುಹುಟ್ಟು ನೀಡಿದ್ದಾರೆ.

ಪಶ್ಚಿಮ ಬಂಗಾಳದಿಂದ ಬೆಂಗಳೂರಿಗೆ ಬಂದಿದ್ದ ಮಂಡಲ್ (44) ಎಂಬುವವರು ಪರಿಚಿತರೊಬ್ಬರ ಮೂಲಕ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆಗಾಗಲೇ ಕರೊನಾ ಸೊಂಕಿಗೆ ಒಳಗಾಗಿ ಚಿಕಿತ್ಸೆ ಸಹ ಪಡೆದಿದ್ದರು. ಸವಾಲು ಸ್ವೀಕರಿಸಿದ ವೈದ್ಯರ ತಂಡ ಬ್ಲಾಕ್ ಆಗಿದ್ದ ರಕ್ತನಾಳಗಳನ್ನು ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಿ ಸರಿಪಡಿಸಿದೆ.

ತುಮಕೂರು ತಾಲೂಕು ಬಂಡಿಹಳ್ಳಿಯ 48 ವರ್ಷದ ವಾಟರ್‌ಮನ್ ಕೃಷ್ಣಾಚಾರಿ ಹಾಗೂ ಗುಬ್ಬಿ ತಾಲೂಕು ಚೇಳೂರಿನ ರೈತ 50 ವರ್ಷದ ರಂಗಸ್ವಾಮಯ್ಯ ಅವರಿಗೆ ಆಕ್ಸಿಜನ್ ಕೊರತೆ ನೀಗಿಸಿ ಓಪನ್ ಹಾರ್ಟ್ ಸರ್ಜರಿ ವಾಡಿ ಯಶಸ್ಸು ಸಾಧಿಸಲಾಗಿದೆ. ಜಿಲ್ಲಾ ಕೇಂದ್ರದಲ್ಲಿ ಹೃದಯಕ್ಕೆ ಸಂಬಂಧಿಸಿದಂತೆ ಸೂಕ್ಷ್ಮ ರೀತಿಯ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಲಭ್ಯವಾಗುತ್ತಿದೆ.

ಕೋವಿಡ್ ವೇಳೆಯಲ್ಲಿ ಸವಾಲಿನ ಕೆಲಸ : ಕರೊನಾ ಸಂದರ್ಭದಲ್ಲಿ ರೋಗಿಯ ಉಸಿರಾಟದಲ್ಲಿ ತೀವ್ರ ವ್ಯತ್ಯಾಸವಾಗಿತ್ತು. ಉಸಿರಾಟ (ಪಲ್ಸ್ ರೇಟ್) ಸಾವಾನ್ಯ ಸ್ಥಿತಿಗೆ ಬರುವವರೆಗೂ ಆಕ್ಸಿಜನ್ ಕೊರತೆಯಿಂದ ಶಸ್ತ್ರ ಚಿಕಿತ್ಸೆ ವಾಡಲು ಸಾಧ್ಯವಿಲ್ಲ. ಇಂತಹ ಸಂದರ್ಭ ವೈದ್ಯರಿಗೆ ಸವಾಲಾಗಿತ್ತು. ಈ ಮೂರು ಪ್ರಕರಣಗಳ ರೋಗಿಗಳಲ್ಲಿ ಆತ್ಮವಿಶ್ವಾಸ ತುಂಬುವ ಮೂಲಕ ಅವರ ಉಸಿರಾಟವನ್ನು ಸಹಜ ಸ್ಥಿತಿಗೆ ತಂದು ತೀವ್ರ ನಿಗಾ ಟಕದಲ್ಲಿ ಇರಿಸಿ ಚೇತರಿಕೆ ಕಂಡ ಕೂಡಲೇ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಮುಗಿಸಲಾಯಿತು ಎಂದು ಡಾ.ತಮೀಮ್ ಅಹ್ಮದ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net