

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿಶ್ವ ಹೃದಯ ದಿನ ನಿಮಿತ್ತ ನಗರದ ಯುನಿಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರೋಟರಿ ಕ್ಲಬ್ ಮಿಡ್‌ಟೌನ್ ಆಶ್ರಯದಲ್ಲಿ ಸೆ. 25ರಿಂದ ಅ. 7ರವರೆಗೆ ಆಸ್ಪತ್ರೆಯಲ್ಲಿ ಹೃದಯ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಆಸ್ಪತ್ರೆ ವೈದ್ಯ ಡಾ. ಪ್ರಕಾಶ ರಾಮನಗೌಡರ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಪೂರ್ಣ ಪ್ರಮಾಣದಲ್ಲಿ ಹೃದಯ ತಪಾಸಣೆ ಮಾಡಿಸಿಕೊಳ್ಳುವುದು ಬಡ ಜನರಿಗೆ ಅಸಾಧ್ಯ. ಹೀಗಾಗಿ ಈ ಶಿಬಿರ ಆಯೋಜಿಸಲಾಗಿದ್ದು, ಪ್ರತಿ ತಪಾಸಣೆಯನ್ನು ರಿಯಾಯಿತಿ ದರದಲ್ಲಿ ಮಾಡಲಾಗುವುದು ಎಂದರು.
ಶಿಬಿರದಲ್ಲಿ ಬಿಪಿ, ಶುಗರ್, ಇಸಿಜಿ, 2ಡಿ ಇಕೋ, ಟಿಎಂಟಿ ಸೇರಿ ಇತರ ತಪಾಸಣೆ ಜತೆಗೆ ಶೇ. 50ರಷ್ಟು ರಿಯಾಯಿತಿ ದರದಲ್ಲಿ ಆ್ಯಂಜಿಯೋಗ್ರಾಫಿ ನಡೆಸಲಾಗುವುದು. ಇದಲ್ಲದೆ ಹೃದಯ ರೋಗ ತಜ್ಞ ಡಾ. ಚೌಡಪ್ಪ ಶಾಕಾಪುರ ಸಲಹೆ ನೀಡಲಿದ್ದು, ನುಭವಿ ಹೃದಯ ರೋಗ ತಜ್ಞರ ತಂಡ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ರಿಯಾಯ್ತಿ ದರವನ್ನೂ ನೀಡಲಾಗದ, ಮೊದಲು ನೋಂದಣಿ ಮಾಡಿಸಿರುವ 20 ಬಡ ಜನರಿಗೆ ರೋಟರಿ ಕ್ಲಬ್ ಮಿಡ್‌ಟೌನ್ ಸಹಾಯ ಧನ ನೀಡಲಿದೆ. ಆಸಕ್ತರು ಶಿಬಿರದ ಪ್ರಯೋಜನ ಪಡೆಯಬೇಕು ಎಂದರು.
ಡಾ. ಚೌಡಪ್ಪ ಶಾಖಾಪುರ, ಡಾ. ಜ್ಯೋತಿಪ್ರಕಾಶ ಸುಲ್ತಾನಪುರಿ, ಶಿವಯೋಗಿ ಅಮಿನಗಡ, ಹರ್ಷಾ ತುರಮರಿ, ಇತರರು ಇದ್ದರು.