ಹೃದಯ ಖಾಯಿಲೆ ನಿರ್ಲಕ್ಷ ಮಾಡಬೇಡಿ

Published on

ಬಳ್ಳಾರಿ : ಹೃದಯ ಸಂಬಂಧಿತ ಯಾವುದೇ ಖಾಯಿಲೆಗಳಿಗೆ ನಿರ್ಲಕ್ಷೃ ಮಾಡದೇ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಬೇಕು ಎಂದು ಡಿಎಚ್‌ಒ ಡಾ. ವೈ. ರಮೇಶಬಾಬು ಹೇಳಿದರು.
ನಗರದ ಕೌಲಬಜಾರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಘಟಕ ಸಹಯೋಗದಲ್ಲಿ ವಿಶ್ವ ಹೃದಯ ದಿನ ಹಾಗೂ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಬುಧವಾರ ಆಯೋಜಿಸಿದ್ದ ಜಾಗೃತಿ ಹಾಗೂ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ಹೃದಯಾಘಾತವಾಗುವುದು ಒಂದು ಭಯಾನಕ ಅನುಭವ. ಜೀವಕ್ಕೆ ಅಪಾಯಕಾರಿಯೂ ಹೌದು, ದೈನಂದಿನ ಒತ್ತಡದ ಜೀವನಶೈಲಿಯಲ್ಲಿ ಬದಲಾವಣೆಯೊಂದಿಗೆ ಮಾನಸಿಕ ಒತ್ತಡವನ್ನು ಸೂಕ್ತವಾಗಿ ನಿಭಾಯಿಸುವ ಜೊತೆಗೆ ನಿಯಮಿತ ವ್ಯಾಯಾಮಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ವಿ. ಕೆ. ಮರಿಯಂಬಿ ಮಾತನಾಡಿ, ಹೃದಯ ಸಂಬಂಧಿತ ಕಾಯಿಲೆಗಳ ಜತೆಗೆ ಹಿರಿಯ ನಾಗರಿಕರ ಆರೈಕೆಯು ಮುಖ್ಯವಾಗಿದ್ದು, ಸಾಮಾನ್ಯವಾಗಿ ವಯಸ್ಸಾದಂತೆ ಕಣ್ಣಿನಪೊರೆ, ಕಿವುಡುತನ, ಅಧಿಕ ರಕ್ತದೊತ್ತಡ, ಖಿನ್ನತೆ, ನರದೌರ್ಬಲ್ಯ ರೋಗ, ದೇಹದ ಭಂಗಿಯಲ್ಲಿ ಅಸ್ಥಿರತೆ, ಮಲಬದ್ಧತೆ ಕಾಣಿಸಿಕೊಳ್ಳುವುದು ಸಹಜವಾಗಿದೆ ಎಂದರು.
ಮಹಾನಗರಪಾಲಿಕೆ ಉಪಮೇಯರ್ ಡಿ. ಸುಕುಂ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿದರು.
ಆರೋಗ್ಯ ತಪಾಸಣೆ ಶಿಬಿರದಲ್ಲಿ 101 ಜನರ ಪರೀಕ್ಷೆ ಮಾಡಲಾಗಿ, ಇವರಲ್ಲಿ ಹೊಸದಾಗಿ 09 ರಕ್ತದೊತ್ತಡ, 01 ಸಕ್ಕರೆ ಕಾಯಿಲೆ ಇರುವವರು ಪತ್ತೆಯಾಗಿದ್ದು, 02 ಜನರಿಗೆ ಇಸಿಜಿ ಪರೀಕ್ಷೆಗಳನ್ನು ಕೈಗೊಳ್ಳಲಾಯಿತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net