ಹೂವು ಬೆಳೆಗಾರರಿಗೆ ಬೇಡ ಆತಂಕ

11 GAJENDRAGAD 2
Published on

ಗಜೇಂದ್ರಗಡ: ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಹೂವು ಬೆಳೆಗಾರರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ರೈತರ ಹಿತಕ್ಕಾಗಿ ತೋಟಗಾರಿಕೆ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ಅನಿಲ ರಾಠೋಡ ಹೇಳಿದರು. ಸಮೀಪದ ವೀರಾಪುರ, ಗೋಗೇರಿ, ಚಿಲಝುರಿ ಗ್ರಾಮಗಳ ಹೂವು ಬೆಳೆಗಾರರ ತೋಟಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು. ಕೊಳವೆಬಾವಿ ಆಶ್ರಿತ ಈ ಭಾಗದ ರೈತರು ಕಡಿಮೆ ನೀರಿನಲ್ಲಿ ಹೂವು ಬೆಳೆದು ಅಧಿಕ ಲಾಭ ಪಡೆಯುತ್ತಿದ್ದರು. ಲಾಕ್​ಡೌನ್ ಬಿಸಿ ಹೂವು ಬೆಳೆಗಾರರಿಗೂ ತಟ್ಟಿದೆ. ಹೂವು ಕಟಾವು ಮಾಡಲಾಗದೆ, ಸರಬರಾಜು ಮಾಡಲಾಗದಂತಹ ಸ್ಥಿತಿ ಎದುರಿಸುತ್ತಿದ್ದರು. ಆದರೀಗ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದ್ದು, ಯಾವುದೇ ಸಮಸ್ಯೆಯಾಗದಂತೆ ತೋಟಗಾರಿಕೆ ಇಲಾಖೆ ಕ್ರಮ ಕೈಗೊಂಡಿದೆ. ಹೂವು ಕಟಾವು ಮಾಡಿದ ರೈತರಿಗೆ ಬೆಳೆ ಸಾಗಿಸಲು ಪಾಸ್ ವಿತರಿಸಲಾಗುತ್ತಿದೆ. ಸರ್ಕಾರ ಕೂಡ ಹೂವು ಬೆಳೆಗಾರರಿಗೆ ಪ್ರತಿ ಹೆಕ್ಟೇರ್​ಗೆ 25 ಸಾವಿರ ರೂ. ಪರಿಹಾರ ಧನ ಘೊಷಿಸಿದೆ. ಹನಿ ನೀರಾವರಿಗೆ ಡ್ರಿಪ್, ಹೂವು ಬೆಳೆಗಾರರಿಗೆ ಸಹಾಯ ಧನವಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net