ಹೂವಿನಹಿಪ್ಪರಗಿಯಲ್ಲಿ ವಾಟರ್‌ಮ್ಯಾನ್ ಬದಲಾವಣೆಗೆ ಆಗ್ರಹ

Huvinahipparagi, waterman, water, change, demand
ಹೂವಿನಹಿಪ್ಪರಗಿಯ 3ನೇ ವಾರ್ಡ್‌ನಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ನಿವಾಸಿಗಳು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಲ್ಯಾಣಿ ಅವರಿಗೆ ಮನವಿ ಸಲ್ಲಿಸಿದರು. ರಮೇಶ ಅಸ್ಕಿ, ಸಿದ್ದು ಮೇಟಿ, ರಾಜುಗೌಡ ಬಿರಾದಾರ, ಅಂಬಿಕಾ ಅಸ್ಕಿ, ಶಂಕ್ರಮ್ಮ ಹಿರೇಮಠ, ಮಲ್ಲಮ್ಮ ಜಾಯವಾಡಗಿ, ಸುಭದ್ರ ಹಜೇರಿ ಇತರರಿದ್ದರು.
Published on

ಹೂವಿನಹಿಪ್ಪರಗಿ: ಸ್ಥಳೀಯ 3ನೇ ವಾರ್ಡ್‌ನಲ್ಲಿ ಸಮರ್ಪಕವಾಗಿ ಕುಡಿಯಲು ನೀರು ಸರಬರಾಜು ಮಾಡುವಂತೆ ಆಗ್ರಹಿಸಿ ನಿವಾಸಿಗಳು ಸೋಮವಾರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಲ್ಯಾಣಿ ಅವರಿಗೆ ಮನವಿ ಸಲ್ಲಿಸಿದರು.

ಮುಖಂಡ ರಮೇಶ ಅಸ್ಕಿ ಮಾತನಾಡಿ, ಗ್ರಾಮದ 3ನೇ ವಾರ್ಡ್‌ನಲ್ಲಿ ಪ್ರತಿದಿನ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಯ ವಾಟರ್‌ಮ್ಯಾನ್ ನೀರು ಬಿಡುವುದರಲ್ಲಿ ತಾರತ್ಯಮ ಮಾಡುತ್ತಾರೆ. ಹಣ ಕೂಟ್ಟವರ ಕಡೆ ನೀರು ಬಿಡುತ್ತಾರೆ. ಸಾರ್ವಜನಿಕರ ಜತೆ ಅಸಭ್ಯವಾಗಿ ವರ್ತನೆ ಮಾಡುತ್ತಾರೆ. ಇಂತಹ ವಾಟರ್‌ಮ್ಯಾನ್ ನಮಗೆ ಬೇಡ. ಬೇರೆ ಯಾರಿಗಾದರೂ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಸಿದ್ದು ಮೇಟಿ, ರಾಜುಗೌಡ ಬಿರಾದಾರ, ಹಣಮಂತರಾಯ ಗುಣಕಿ, ಮಲ್ಲು ನಾಡಗೌಡ, ಬಸನಗೌಡ ಪಾಟೀಲ, ಅಂಬಿಕಾ ಅಸ್ಕಿ, ಶಂಕ್ರಮ್ಮ ಹಿರೇಮಠ, ಮಲ್ಲಮ್ಮ ಜಾಯವಾಡಗಿ, ಸುಭದ್ರ ಹಜೇರಿ, ಮಾನಪ್ಪ ಬಡಿಗೇರ, ಸಂತೋಷ ಹಜೇರಿ, ಈರಯ್ಯ ಹಿರೇಮಠ, ಎಂ.ಎಸ್.ಬಾಗೇವಾಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net