ಹೂವಿನಹಳ್ಳಿಯಲ್ಲಿ ಗೋಶಾಲೆ ನಿರ್ಮಾಣಕ್ಕೆ ಭೂಮಿಪೂಜೆ

IMG_20230223_151521
Published on

ನುಗ್ಗೇಹಳ್ಳಿ: ಹಳ್ಳಿಕಾರ್ ಗೋವುಗಳ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕು ಎಂದು ಜಿಲ್ಲಾ ಭೂಸ್ವಾಧೀನಾಧಿಕಾರಿ ಮಂಜುನಾಥ್ ತಿಳಿಸಿದರು.


ಹೂವಿನಹಳ್ಳಿ ಗ್ರಾಮದಲ್ಲಿ ಗುರುವಾರ 1 ಕೋಟಿ ರೂ. ವೆಚ್ಚದ ಪುಣ್ಯಕೋಟಿ ಗೋಶಾಲೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಹಳ್ಳಿಗಳಲ್ಲಿ ಹಳ್ಳಿಕಾರ್, ಅಮೃತ್‌ಮಹಲ್ ತಳಿಯ ಹಸುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆರ್ಥಿಕ ಪರಿಸ್ಥಿತಿಗೋಸ್ಕರ ರೈತರು ಹೆಚ್ಚಾಗಿ ಸೀಮೆ ಹುಸುಗಳನ್ನು ಸಾಕುತ್ತಿದ್ದಾರೆ. ದೇಸಿ ತಳಿ ಉಳಿಸಲು ಗೋಶಾಲೆಗಳು ಅಗತ್ಯವಾಗಿವೆ ಎಂದರು.


ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್.ಎಂ.ನಟರಾಜ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಯರಾಮ್, ಪುಣ್ಯಕೋಟಿ ಗೋಶಾಲೆ ಟ್ರಸ್ಟ್ ಅಧ್ಯಕ್ಷ ಶ್ರೀಧರ್ ಯಾದವ್, ಕಾರ್ಯದರ್ಶಿ ಪೂರ್ಣಿಮಾ ನಟೇಶ್, ಖಜಾಂಚಿ ನೇತ್ರ ಶ್ರೀಧರ್,ಎಚ್.ಎಂ.ರಮೇಶ್, ರಾಮಕೃಷ್ಣಪ್ಪ, ಗೋಪಾಲ್, ಮಂಜುನಾಥ್, ಎನ್.ಡಿ.ಶಿವಪ್ಪ, ಚೌಡಪ್ಪ, ರಾಜಣ್ಣ, ಯಲ್ಲಪ್ಪ, ಅರ್ಜುನ್, ಮಂಜುನಾಥ್, ಹೊನ್ನೇಗೌಡ, ನಟರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net