ಹೂವಿನ ವ್ಯಾಪಾರಸ್ಥರಿಂದ ಹೆಚ್ಚನ ಸುಂಕ ವಸೂಲಿ ಆರೋಪ

ಹೂವಿನ ವ್ಯಾಪಾರಸ್ಥರಿಂದ ಹೆಚ್ಚನ ಸುಂಕ ವಸೂಲಿ ಆರೋಪ
Published on

ಹಾಸನ: ನಗರದ ಮಹಾವೀರ ವೃತ್ತದಲ್ಲಿ ಹೂವಿನ ವ್ಯಾಪಾರ ಮಾಡುವವರು ಮತ್ತು ಸುಂಕ ವಸೂಲಿ ಮಾಡುವವರ ನಡುವೆ ಶುಕ್ರವಾರ ಬೆಳ್ಳಗೆ ಮಾತಿನ ಚಕಮಕಿ ನಡೆಯಿತು.

ನಾವು ಹಲವು ವರ್ಷಗಳಿಂದ ಹೂವುನ ವ್ಯಾಪಾರ ಮಾಡಿಕೊಂಡು ಬರುತ್ತಿದ್ದೇವೆ ಆದರೆ ನಗರಸಭೆಯಿಂದ ಗುತ್ತಿಗೆ ಪಡೆದಿರುವಂತಹ ಪ್ರವೀಣ್ ಎಂಬತ ಪ್ರತಿನಿತ್ಯ 20 ರಿಂದ 30 ಸುಂಕ ವಸೂಲಿ ಮಾಡುತ್ತಿದ್ದಾರೆ. ಕೊಡದಿದ್ದರೆ ಅವ್ಯಾಚಪದಗಳಿಂದ ನಿಂದಿಸುವುದರಲ್ಲದೆ,ಹಲ್ಲೆ ಮಾಡಲು ಕೂಡ ಮುಂದಾಗುತ್ತಾರೆ ಎಂದು ವ್ಯಾಪಾರಸ್ಥರು ಆರೋಪಿಸಿದರು

ಮೊದಲು ಹೂವಿನ ಮಾರುಕಟ್ಟೆಯನ್ನು ದೇವಿಗೆರೆ ವೃತ್ತದ ಸಮೀಪ ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟಿದ್ದರು ಆದರೆ ಟ್ರಾಫಿಕ್ ಸಮಸ್ಯೆಯಿಂದ ನಮ್ಮನ್ನ ಮಹಾವೀರ ವೃತ್ತಕ್ಕೆ ಸ್ಥಳಾಂತರಿಸಿದ್ದರು. ಇಲ್ಲಿ ನಮಗೆ ಸರಿಯಾದ ರೀತಿ ವ್ಯವಸ್ಥೆ ಮಾಡಿಕೊಟ್ಟಿಲ್ಲ ನಗರಸಭೆಯವರಾಗಲಿ, ಶಾಸಕರಾಗಲಿ ನಮ್ಮ ಕಷ್ಟ ಸುಖಗಳನ್ನ ಒಂದು ದಿನವೂ ಕೂಡ ಕೇಳಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಲ್ಲದೆ ಸುಂಕ ವಸೂಲಿದೆ ಮಾಡುವವರು ರಸ್ತೆ ಬದಿಯಲ್ಲಿ ಮಾರಾಟ ಮಾಡಲು ಅವಕಾಶ ಮಾಡಿಕೊಡುತ್ತಾರೆ ಇದರಿಂದ ನಮಗೆ ಸಾಕಷ್ಟು ತೊಂದರೆಯಾಗುತ್ತದೆ. ಸಾಲ ಸೂಲ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದೇವೆ, ಪ್ರತಿನಿತ್ಯ ನಷ್ಟದಲ್ಲೇ ಜೀವನ ಸಾಗಿಸಬೇಕಾಗಿದೆ ನಮಗೆ ಒಂದು ಶಾಶ್ವತ ಪರಿಹಾರವನ್ನು ಕಲ್ಪಿಸಿ ಕೊಡಬೇಕು ಎಂದು ಒತ್ತಾಯಿಸಿದರು.

ನಗರಸಭೆಯಿಂದ ಟೆಂಡರ್ ಪಡೆದು ಸುಂಕ ಸಂಗ್ರಹಿಸುವ ಪ್ರವೀಣ್ ಮಾತನಾಡಿ, ಸಣ್ಣ ಅಂಗಡಿ ಹಾಗೂ ವಯೋವೃದ್ಧರು ಇದ್ದವರಿಗೆ 10ರೂ ತೆಗೆದುಕೊಳ್ಳುತ್ತೇನೆ ಅನೇಕ ಬಡವರಿಗೆ ಉಚಿತವಾಗಿ ನೀಡಿದ್ದೇನೆ.ದೊಡ್ಡ ದೊಡ್ಡ ಅಂಗಡಿಯವರಿಗೆ 30ರೂ ಸಂಗ್ರಹ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಬಾಬು ಮಾತನಾಡಿ ವ್ಯಾಪಾರಿಗಳು ವ್ಯಾಪಾರ ಮಾಡಲು ಸರ್ಕಾರವೇ ಅವಕಾಶ ಮಾಡಿಕೊಟ್ಟಿದೆ. ಹೈಕೋರ್ಟ್ ಆದೇಶ ವಿದ್ದರೂ ಕೂಡ ಸುಂಕ ವಸೂಲಿ ಮಾಡಲಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ನಗರಸಭೆಯವರು ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು

ಈ ಸಂದರ್ಭದಲ್ಲಿ ಹೂವಿನ ವ್ಯಾಪಾರಿಗಳಾದ ಗೌರಮ್ಮ, ಪ್ರೇಮ,ರಂಗಮ್ಮ ಸೇರಿಂದತೆ ಇತತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net