

ಭಾಲ್ಕಿ: ನಾವದಗಿ ಗ್ರಾಮದಲ್ಲಿ ಮಂಗಳವಾರ ಸದ್ಗುರು ಶ್ರೀ ರೇವಪ್ಪಯ್ಯ ಸ್ವಾಮೀಜಿ ಹೋಳಿಗೆ ತುಪ್ಪದ ಜಾತ್ರೆ ಅದ್ದೂರಿಯಾಗಿ ಜರುಗಿತು.
ಸದ್ಗುರು ಶ್ರೀ ರೇವಪ್ಪಯ್ಯ ಸ್ವಾಮೀಜಿ ಗದ್ದುಗೆಗೆ ಪೂಜೆ, ೨೧ ಮುತ್ತೈದೆಯರಿಗೆ ಉಡಿ ತುಂಬುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಯಿತು. ಬೆಳಗ್ಗೆಯಿಂದಲೇ ಭಕ್ತರು ಹೋಳಿಗೆ, ಕಡಬು ತುಪ್ಪದ ಪ್ರಸಾದ ಸ್ವೀಕರಿಸಿದರು.
ದೇವಸ್ಥಾನ ಪ್ರಮುಖರಾದ ರೇವಣಯ್ಯ ಸ್ವಾಮಿ, ಶಾಂತವೀರ ಸ್ವಾಮಿ, ಹಾವಯ್ಯ ಸ್ವಾಮಿ, ಸಿದ್ದಲಿಂಗ ಸ್ವಾಮಿ, ಪ್ರಭುಲಿಂಗ ಸ್ವಾಮಿ, ರೇವಪ್ಪಯ್ಯ ಟ್ರಸ್ಟ್ ಕಮಿಟಿ ಅಧ್ಯಕ್ಷ ಪ್ರದೀಪ ಪಾಟೀಲ್, ಸದಸ್ಯರಾದ ಮಲ್ಲಿಕಾರ್ಜುನ ಶೇರಿಕಾರ, ರೇವಣಯ್ಯ ಸ್ವಾಮಿ ರಾಜೇಶ್ವರ, ಶಿವಪ್ಪ ಕಲ್ಯಾಣರಾವ ಜಮಾದಾರ, ಗ್ರಾಪಂ ಅಧ್ಯಕ್ಷ ರಾಜಶೇಖರ ಬಿರಾದಾರ, ಶಿವರಾಜ ಬಿರಾದಾರ ಪ್ರಸಾದ ವ್ಯವಸ್ಥೆಗೆ ಸಹಕಾರ ನೀಡಿದರು.