ಹೂತಿದ್ದ ಶವ ಹೊರ ತೆಗೆದ ಪೊಲೀಸರು

20-07-Shiva-4
ರಾಯಚೂರು ತಾಲೂಕಿನ ವಡ್ಲೂರು ಗ್ರಾಮದ ಹೊರವಲಯದಲ್ಲಿ ಮಗ ಕೊಂದು ಹೂತು ಹಾಕಿದ್ದ ತಂದೆಯ ಶವವನ್ನು ಗುರುವಾರ ಪೊಲೀಸರು ಹೊರತೆಗೆಯುತ್ತಿರುವುದು.
Published on

ರಾಯಚೂರು: ಸ್ವಾೀನ ಪರಿಹಾರದ ಹಣಕ್ಕಾಗಿ ಮಗ ತಂದೆಯನ್ನು ಕೊಂದು ಹೂತು ಹಾಕಿದ್ದ ಶವವನ್ನು ಗುರುವಾರ ಸಂಜೆ ಪೊಲೀಸರು ಹೊರ ತೆಗೆದು ರಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದರು.
ಭಾರತ ಮಾಲಾ ರಾಷ್ಟ್ರೀಯ ಹೆದ್ದಾರಿಗೆ ಸ್ವಾೀನ ಪಡಿಸಿಕೊಳ್ಳಲಾಗಿದ್ದ ಜಮೀನಿಗೆ ಬಂದಿದ್ದ ಪರಿಹಾರದ ಹಣಕ್ಕೆ ಸಂಬಂಸಿದಂತೆ ತಂದೆ ಮಗನ ನಡುವೆ ಜಟಾಪಟಿ ನಡೆದು ತಾಲೂಕಿನ ವಡ್ಲೂರು ಗ್ರಾಮದಲ್ಲಿ ತಂದೆ ಶಿವನಪ್ಪನನ್ನು ಪುತ್ರ ಈರಣ್ಣ ಕೊಲೆ ಮಾಡಿ 16 ದಿನಗಳ ಹಿಂದೆ ಹೂತು ಹಾಕಿದ್ದ.
ತಂದೆಯನ್ನು ಕೊಲೆ ಮಾಡಿ ಹೂತು ಹಾಕಿದ ನಂತರ ಪೊಲೀಸ್ ಠಾಣೆಗೆ ಹೋಗಿ ತಂದೆ ಕಾಣೆಯಾಗಿದ್ದಾನೆ ಎಂದು ನಾಟಕವಾಗಿಡಿದ್ದ. ಸಂಬಂಕರು ಮತ್ತು ಗ್ರಾಮಸ್ಥರಿಗೆ ಅನುಮಾನ ಬಂದು ವಿಚಾರಣೆ ನಡೆಸಿದಾಗ ಈರಣ್ಣ ಬುಧವಾರ ಗ್ರಾಮೀಣ ಠಾಣೆಗೆ ಬಂದು ಶರಣಾಗಿ ತಪ್ಪೊಪ್ಪಿಕೊಂಡಿದ್ದರು.
ಗ್ರಾಮೀಣ ಠಾಣೆ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು ಹೂತಿದ್ದ ಶವವನ್ನು ನಿರಂತರವಾಗಿ ಸುರಿಯುತ್ತಿರುವ ಮಳೆಯ ನಡುವೆ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಮಳೆ ಹಾಗೂ ಹೂತು ಬಹಳ ದಿನವಾಗಿದ್ದರಿಂದ ಶವ ಕೊಳೆತು ಗುರುತು ಸಿಗದಂತಾಗಿತ್ತು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತೆ ಮಹೆಬೂಬಿ, ಗ್ರಾಮೀಣ ಠಾಣೆ ಸಿಬ್ಬಂದಿ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net