ಹೂತರೆ ಮಣ್ಣು ಹಾಕಿ, ಸುಟ್ಟರೆ ಮೇಣದ ಬತ್ತಿ ಬೆಳಗಿ: ಖರ್ಗೆ ಭಾವನಾತ್ಮಕ ಮಾತು

m kharge
Published on

ಕಲಬುರಗಿ: ನನಗೆ ಚಿಂತೆ ಇಲ್ಲ. ದೊಡ್ಡ ಸ್ಥಾನ ಸಿಕ್ಕಿವೆ. ವೋಟ್ ತಪ್ಪಿದ್ದರೆ ನನಗೆ ಸ್ಥಾನ ಇಲ್ಲ ಎಂದು ತಿಳಿದುಕೊಳ್ಳುತ್ತೇನೆ. ಒಳ್ಳೆ ಕೆಲಸಕ್ಕೆ ನೆನಪಿಸಿಕೊಂಡು ಮಣ್ಣು ಹಾಕಲು ಬನ್ನಿ, ಸುಟ್ಟರೆ ಮೇಣದ ಬತ್ತಿ ಹಚ್ಚಿ, ಹೂತರೆ ಮಣ್ಣು ಹಾಕಿ. ಒಳ್ಳೆ ಕೆಲಸ ಮಾಡಿದ್ದಕ್ಕೆ ಜನ ಬಂದಿದ್ದಾರೆ ಎಂದು ಜನ ಮಾತನಾಡಿಕೊಳ್ಳಲಿ ಎಂದು ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಅಫಜಲಪುರದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿ, ನಾನು ಹುಟ್ಟಿದ್ದೆ ರಾಜಕೀಯ ಮಾಡಲು. ದೇಶದ ಸಂವಿಧಾನ, ಪ್ರಜಾಪ್ರಭುತ್ವ ಉಳಿಸಲು ಕೊನೆ ಉಸಿರುವರೆಗೆ ಹೋರಾಟ ಇರುತ್ತೆ. ತತ್ವಕ್ಕೆ ಸೋಲಾಗಬಾರದು . ಹೋರಾಡಬೇಕು. ತುಳಿತಕ್ಕೆ ಒಳಪಟ್ಟ ಸಮಾಜಕ್ಕೆ ನ್ಯಾಯ ಒದಗಿಸಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net