

ಕಲಬುರಗಿ: ಹೂಗಾರ ಸಮಾಜದ ಅಭಿವೃದ್ಧಿಗೆ ೧೦೦ ಕೋಟಿ ರೂ. ಮೀಸಲು ಇಡಬೇಕು, ಕರ್ನಾಟಕದ ಮಾಲಿ, ಮಾಲಗಾರ, ಹೂಗಾರ ಅಭಿವೃದ್ಧಿ ನಿಗಮಕ್ಕೆ ಹೂಗಾರ ಸಮಾಜದ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ನೇಮಿಸುವುದು ಸೇರಿ ವಿವಿಧ ಬೇಡಿಕೆಗೆ ಆಗ್ರಹಿಸಿ ಹೂಗಾರ ಮಹಾಸಭಾ ಸಂಘದಿAದ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ, ಹೂಗಾರ ಸಮಾಜವು ಅತ್ಯಂತ ಹಿಂದುಳಿದಿದ್ದು, ಅಭಿವೃದ್ಧಿಗೆ ಯಾರೂ ಸ್ಪಂದಿಸುತ್ತಿಲ್ಲ. ಸಮಾಜದ ಅಭಿವೃದ್ಧಿ ನಿಗಮಕ್ಕೆ ಬಜೆಟ್‌ನಲ್ಲಿ ಅನುದಾನ ಮೀಸಲು ಇಡದೆ ಅನ್ಯಾಯ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಸಮಾಜದ ಅಭಿವೃದ್ಧಿಗೆ ಹಣ ನೀಡಬೇಕು, ನಿಗಮಕ್ಕೆ ಸಮಾಜದ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ನೀಡಲಾಯಿತು. ಬೇಡಿಕೆ ಈಡೇರಿಸದಿದ್ದರೆ ಬೆಂಗಳೂರಿನ ಸ್ವತಂತ್ರÈ ಉದ್ಯಾನದಲ್ಲಿ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶ್ರೀ ಗುರುದೇವ ಶರಣರು, ಪ್ರಮುಖರಾದ ಬಿ.ಪಿ.ಹೂಗಾರ, ಪ್ರಕಾಶ ಫುಲಾರಿ, ಬಸವರಾಜ ಹೂಗಾರ, ದತ್ತರಾಜ ಹೂಗಾರ, ಚನ್ನಬಸಪ್ಪ ಹೂಗಾರ, ಬಸವರಾಜ ಹೂಗಾರ ಕೋಟನೂರ, ದಯಾನಂದ ಹೂಗಾರ, ಶ್ರೀಮಂತ ಹೂಗಾರ, ಶರಣಬಸಪ್ಪ ಹೂಗಾರ, ಮಲ್ಲಿನಾಥ ಹೂಗಾರ, ಪರಮಾನಂದ, ಶರಣಬಸಪ್ಪ ಹೂಗಾರ, ಪ್ರಭು ಹೂಗಾರ, ಆನಂದ ಹೂಗಾರ ಇತರರಿದ್ದರು.