ಹೂಗಾರ ನಿಗಮಕ್ಕೆ ಅನುದಾನ ಬಿಡುಗಡೆಗೆ ಆಗ್ರಹ

ydg04
Published on

ಯಾದಗಿರಿ: ಹೂಗಾರ ಅಭಿವೃದ್ಧಿ ನಿಗಮಕ್ಕೆ ಈ ಕೂಡಲೆ ೧೦೦ ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು ಎಂದು ಅಖಂಡ ಕರ್ನಾಟಕ ಹೂಗಾರ ಮಹಾಸಭಾದ ಜಿಲ್ಲಾ ಘಟಕದ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಕರ್ನಾಟಕದಲ್ಲಿ ವಿವಿಧ ಉಪನಾಮಗಳಿಂದ ಕರೆಯಲ್ಪಡುವ ಹೂಗಾರ, ಜೀರ್, ಪೂಜಾರ್, ಪೂಲಾರಿ, ಮಾಲಿ, ಮಾಲಗಾರ್, ಗುರವ್, ಹೂವಾಡಿಗ, ಪುಷ್ಪದತ್ತ, ಥಾಂಬೋಳಿ ಹೀಗೆ ವಿವಿಧ ಹೆಸರುಗಳಿಂದ ಕರೆಯುವ ಈ ಸಮಾಜ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಹಿಂದುಳಿದೆ.
ನಿಗಮಕ್ಕೆ ೧೦೦ ಕೋಟಿ ರೂ.ಬಿಡುಗಡೆ ಮಾಡುವ ಕುರಿತು ಅಧಿವೇಶನದಲ್ಲಿ ತಿರ್ಮಾನ ತೆಗೆದುಕೊಳ್ಳಬೇಕೆಂದು ಸಂಘದ ಪದಾಧಿಕಾರಿಗಳು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಹಿಂದಿನ ಸರ್ಕಾರದಲ್ಲಿ ನಿಗಮ ಸ್ಥಾಪನೆಯಾಗಿದ್ದು, ಹೊಸ ಸರ್ಕಾರ ರಚನೆಯಾಗಿ ೧೭ತಿಂಗಳು ಗತಿಸಿವೆ. ಆದರೂ ನಿಗಮಕ್ಕೆ ಇನ್ನೂ ಒಂದು ನಯಾ ಪೈಸೆ ಹಣ ಬಿಡುಗೆ ಮಾಡಿಲ್ಲ. ೪೦ ವರ್ಷಗಳ ಸತತ ಹೋರಾಟ ಮಾಡಿದರೂ ಈ ಬೇಡಿಕೆಗೆ ಫಲ ಸಿಕ್ಕಿರಲಿಲ್ಲ. ಸತತ ಹೋರಾಟದ ಪರಿಣಾಮ ಸರ್ಕಾರ ಈ ಸಮಾಜಕ್ಕೆ ನಿಗಮ ಘೋಷಣೆ ಮಾಡಿತ್ತು. ಸಮಾಜದ ಜನರ ಹೋರಾಟದಿಂದ ದಕ್ಕಿರುವ ಈ ನಿಗಮಕ್ಕೆ ಸಮಾಜದ ಯಾವುದೇ ಸೂಕ್ತ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಮಾಡಿ ೧೦೦ ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು ಹಾಗೊಂದು ವೇಳೆ ನಿರ್ಲಕ್ಷÈ ವಹಿಸಿದ್ದಲ್ಲಿ ಜು.೨೫ರಂದು ಬೆಂಗಳೂರಿನಲ್ಲಿ ಧರಣಿ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಸಂಘದ ಜಿಲ್ಲಾಧ್ಯಕ್ಷ ಭೀಮಣ್ಣ ಹೂಗಾರ ಹೋತಪೇಠ, ಕಾರ್ಯಧ್ಯಕ್ಷ ಸಂಗಮೇಶ ಹೂಗಾರ, ಗೌರವಾಧ್ಯಕ್ಷ ಖಂಡಪ್ಪ ಪೂಜಾರಿ ಮೈಲಾಪುರ, ಪ್ರಧಾನ ಕಾರ್ಯದರ್ಶಿ ಶಿವಶರಣಪ್ಪ ಹೂಗಾರ ಯಕ್ಷೀಂತಿ, ಬಸವರಾಜ ಹೂಗಾರ, ಮಹಾದೇವಪ್ಪ ಹೂಗಾರ, ಮಲ್ಲು ಹೂಗಾರ, ಶಿವು, ನಾಗರಾಜ, ದೇವರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net