ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ

10mnd2
Published on

ಮುಂಡಗೋಡ: ಪಟ್ಟಣದ ಹಳೆ ಕರಗಿನಕೊಪ್ಪದ ಮೊರಾರ್ಜಿ ಶಾಲೆಯ ಪಕ್ಕದ ಮನೆಯ ಹತ್ತಿರ ಹಾಕಿದ ಹುಲ್ಲಿನ ಬಣವೆಗೆ ಶನಿವಾರ ಸಂಜೆ ಆಕಸ್ಮಿಕ ಬೆಂಕಿ ತಗುಲಿ ಹಾನಿಯಾಗಿದೆ.

ಗಣೇಶ ಲಮಾಣಿ ಎಂಬುವರಿಗೆ ಸೇರಿದ ಹುಲ್ಲಿನ ಬಣವೆ ಇದಾಗಿದ್ದು, ಅಂದಾಜು ನಾಲ್ಕು ಟ್ರ್ಯಾಕ್ಟರ್​ನಷ್ಟು ಹುಲ್ಲು ಸುಟ್ಟಿದೆ. ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಅಗ್ನಿ ಶಾಮಕದಳದ ಸಿಬ್ಬಂದಿ ಕೆ.ಆರ್. ಮಾಳಗಿ, ಬಸವರಾಜ ಇಂಚಲ, ಮಂಜುನಾಥ ಪಟಗಾರ, ಹರೀಶ ಪಟಗಾರ, ದುರ್ಗಪ್ಪ ಹರಿಜನ, ರಾಜೇಶ ಸವಣೂರ ಹಾಗೂ ಸಪ್ನಿಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net