ಹುಲಿಗೆಮ್ಮ ಭಕ್ತರ ಸಾವು

Suryapet-1_V_jpg--442x260-4g
Published on

ಕೊಪ್ಪಳ: ಹುಣ್ಣಿಮೆ ಅಂಗವಾಗಿ ತಾಲೂಕಿನ ಹುಲಿಗೆಮ್ಮ ದೇವಿ ದರ್ಶನ ಪಡೆದು ವಾಪಸ್ಸಾಗುತ್ತಿದ್ದಾಗ ಅಪಘಾತ ಸಂಭಿವಿಸಿ ಇಬ್ಬರು ಭಕ್ತರು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.

ಯಲಬುರ್ಗಾ ತಾಲೂಕು ಹಿರೇವಡ್ರಕಲ್ ಗ್ರಾಮದ ಶರಣಪ್ಪ ಅಗಸರ (32) ಮತ್ತು ಕಾಳಪ್ಪ ಸುಣಗಾರ (30) ಮೃತ ದುರ್ದೈವಿಗಳು. ಹುಲಿಗಿಯಿಂದ ವಾಪಾ್ ಗ್ರಾಮಕ್ಕೆ ವಾಪಸ್ ಮರಳುವಾಗ ಕೊಪ್ಪಳ ತಾಲೂಕಿನ ಉಪಲಾಪುರ ಗ್ರಾಮದ ಬಳಿ ಬೈಕ್ ಮತ್ತು ಸಾರಿಗೆ ಬಸ್ ನಡುವೆ ಅಪಘಾತ ನಡೆದಿದೆ. ಬೈಕ್ ನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net