ಹುಲಿಗಿಗೆ ಆಗಮಿಸಿದ ಭಕ್ತರ ದಂಡು

0108-Kpl-Ravi-2
Published on

ಕೊಪ್ಪಳ: ನಾಡಿನ ಶಕ್ತಿ ದೇವತೆ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಮಂಗಳವಾರ ಹುಣ್ಣಿಗೆ ಅಂಗವಾಗಿ ಲಕ್ಷಾಂತರ ಭಕ್ತರು ಭೇಟಿ ನೀಡಿ ದರ್ಶನ ಪಡೆದರು.


ಮಂಗಳವಾರ ಮತ್ತು ಹುಣ್ಣಿಮೆ ಎರಡು ಏಕಕಾಲಕ್ಕೆ ಆಗಮಿಸಿದ್ದು, ಭಕ್ತರ ಸಂಖ್ಯೆ ಸಾಮಾನ್ಯಕ್ಕಿಂತ ಅಧಿಕವಾಗಿತ್ತು. ಸೋಮವಾರ ರಾತ್ರಿಯಿಂದಲೇ ಭಕ್ತರು ದೇವಸ್ಥಾನದತ್ತ ಆಗಮಿಸಿದರು. ವಸತಿ ನಿಲಯಗಳು ಭರ್ತಿಯಾಗಿದ್ದು, ಬಹುತೇಕ ಜನರು ದೇವಾಲಯ ಅಂಗಳದಲ್ಲೇ ತಂಗಿದ್ದು ಕಂಡುಬಂತು. ಬೆಳಗಿನ ಜಾವದಿಂದ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತು ಅಮ್ಮನ ದರ್ಶನ ಪಡೆದರು. ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ದರ್ಶನಕ್ಕಾಗಿ ಗಂಟೆಗಟ್ಟಲೇ ಕಾಯುವಂತಾಯಿತು.

ಭಕ್ತರ ಸಂಖ್ಯೆಗೆ ತಕ್ಕಂತೆ ಮೂಲ ಸೌಕರ್ಯಗಳು ದೇವಾಲಯದಲ್ಲಿ ಕಲ್ಪಿಸಿಲ್ಲ. ಬಿಸಿನಲ್ಲಿಯೇ ಸರತಿಯಲ್ಲಿ ನಿಲ್ಲುವಂತಾಗಿದೆ. ಆಗಾಗ ಮಳೆಯಾಗಿದ್ದು, ನೆನೆಯುತ್ತಲೇ ದೇವಿ ಮುಖದರ್ಶನಕ್ಕೆ ಭಕ್ತರು ಕಾಯುವಂತಾಗಿದೆ. ದೇವಾಲಯಕ್ಕೆ ಆದಾಯ ಹೆಚ್ಚಾಗಿದ್ದರೂ ಸೌಲಭ್ಯಗಳು ಮಾತ್ರ ಹೆಚ್ಚುತ್ತಿಲ್ಲ. ಸಮಗ್ರ ಅಭಿವೃದ್ದಿಗಾಗಿ ಮಾಸ್ಟರ್ ಪ್ಲಾೃನ್ ರಚಿಸಿದ್ದರೂ ಅನುಷ್ಠಾನ ಕಾಗದದಲ್ಲೇ ಉಳಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net