ಹುಲಿಕೆರೆ ರಾಜಶೇಖರಯ್ಯ ಅವಿರೋಧ ಆಯ್ಕೆ

12blrp1
Published on

ಬೇಲೂರು: ಬೇಲೂರು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನೂತನ ಉಪಾಧ್ಯಕ್ಷರಾಗಿ ಹುಲಿಕೆರೆ ಗ್ರಾಮದ ರಾಜಶೇಖರಯ್ಯ ಅವಿರೋಧವಾಗಿ ಆಯ್ಕೆಯಾದರು.

ಬೇಲೂರು ಪಟ್ಟಣದಲ್ಲಿರುವ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಹಿಂದಿನ ಉಪಾಧ್ಯಕ್ಷರಾಗಿದ್ದ ಕಣಗುಪ್ಪೆ ಕುಮಾರ್ ರಾಜೀನಾಮೆಯಿಂದ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಹುಲಿಕೆರೆ ರಾಜಶೇಖರಯ್ಯ ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಹಾಗೂ ಸಹಕಾರ ಸಂಘಗಳ ವಿಸ್ತರಣಾಧಿಕಾರಿ ಶಕ್ಕು ಅವರು ಹುಲಿಕೆರೆ ರಾಜಶೇಖರಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಬುಧವಾರ ಘೋಷಿಸಿದರು.

ಹುಲಿಕೆರೆ ರಾಜಶೇಖರಯ್ಯ ಮಾತನಾಡಿ, ಶಾಸಕರು, ಸಂಸದರು, ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಎಲ್ಲ ನಿರ್ದೇಶಕರ ಸಹಕಾರದಿಂದ ಉಪಾಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲ ಕೆಲಸಗಳಲ್ಲೂ ಭಾಗಿಯಾಗಿ ಸಂಘವನ್ನು ಉತ್ತಮ ಮಟ್ಟಕ್ಕೆ ಕೊಂಡೊಯ್ಯಲು ಶ್ರಮಿಸುತ್ತೇನೆ ಎಂದರು.

ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಡಿ.ಇ.ಮಲ್ಲೇಗೌಡ ಮಾತನಾಡಿ, ನಮ್ಮ ಸಹಕಾರ ಸಂಘವು ಕೋಟ್ಯಂತರ ರೂ. ಆಸ್ತಿ ಹೊಂದಿದ್ದು ಅದನ್ನು ಉಳಿಸಿ ಸಂಘದ ಅಭಿವೃದ್ಧಿಗೆ ಎಲ್ಲರ ಸಹಕಾರದೊಂದಿಗೆ ಮುನ್ನಡೆಯುತ್ತಿದ್ದೇವೆ. ಸಂಘದಲ್ಲಿ ಉತ್ತಮ ವಹಿವಾಟು ನಡೆಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸಂಘದ ಆವರಣದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಶಾಸಕ ಹಾಗೂ ಸಂಸದರ ಸಹಕಾರದೊಂದಿಗೆ ಹೆಚ್ಚಿನ ಅನುದಾನ ತರಲಿದ್ದೇವೆ ಎಂದರು.

ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಎಸ್.ನಾಗೇಶ್, ರವಿಕುಮಾರ್, ಲಕ್ಷ್ಮಣ್, ಮಾಜಿ ಉಪಾಧ್ಯಕ್ಷ ಕಣಗುಪ್ಪೆ ಕುಮಾರ್, ನಿರ್ದೇಶಕರಾದ ಎಂ.ಕೆ.ಆರ್.ಸೋಮೇಶ್, ವಿಜಯ್‌ಕುಮಾರ್, ಕಾಂತರಾಜು, ಭಾರತೀಗೌಡ, ಪ್ರಿಯಾಂಕಾ, ಜಾನಕಮ್ಮ, ಸಹಕಾರ ಸಂಘಗಳ ವಿಸ್ತರಣಾಧಿಕಾರಿ ಶಕ್ಕು, ಇಒ ದೀಪು, ಸಿಬ್ಬಂದಿ ರಾಧ, ಶುಭ, ಪ್ರಸನ್ನ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net