ಹುಲಿಕಾಂತಿ ಮಠಕ್ಕೆ ರಂಭಾಪುರಿ ಶ್ರೀ ಭೇಟಿ

26BK1
Published on

ಬಸವಕಲ್ಯಾಣ: ನಗರದ ಶಹಾಪುರ ಓಣಿಯಲ್ಲಿರುವ ಹುಲಿಕಾಂತಿ ಮಠದ ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಸನ್ನಿಧಿಗೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಆಗಮಿಸಿ ಪರಿಸರದಲ್ಲಿ ಅಭಿವೃದ್ಧಿ ಕೆಲಸಗಳನ್ನು ವೀಕ್ಷಿಸಿದರು.

ಹುಲಿಕಾಂತಿ ಮಠದಲ್ಲಿ ಜಗದ್ಗುರು ರೇವಣಸಿದ್ದೇಶ್ವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಮಠದ ಜೀರ್ಣಾದ್ಧಾರ ಕೆಲಸದ ಕುರಿತು ಜಗದ್ಗುರುಗಳು ಹರ್ಷ ವ್ಯಕ್ತಪಡಿಸಿದರು. ವೀರಶೈವ ಧರ್ಮ ಪರಂಪರೆ ಅತ್ಯಂತ ಪುರಾತನ ಹಾಗೂ ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಉಳ್ಳ ಹುಲಿಕಾಂತಿ ಮಠವು ಗುರು-ಶಿಷ್ಯ ಭಕ್ತವೃಂದದಿಂದ ಸದಾ ಧಾರ್ಮಾಕ ಚಟುವಟಿಕೆಯ ಕೇಂದ್ರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಿವಯೋಗಿ ಹುಲಿಕಾಂತಿ ಮಠ, ನಿವೃತ್ತ ಪ್ರಾಚಾರ್ಯ ದಯಾನಂದ ಶೀಲವಂತ, ವಿಜಯಕುಮಾರ ನಾಗರಾಳೆ, ಸಂದೀಪ ಪಾಟೀಲ್, ಶರಣಪ್ಪ ಬಿರಾದಾರ್, ಬಸವಂತಪ್ಪ ಲವಾರೆ, ಪ್ರಾಚಾರ್ಯ ಸೂರ್ಯಕಾಂತ ಶೀಲವಂತ, ವೀರಣ್ಣ ಶೀಲವಂತ, ರಮೇಶ ರಾಜೋಳೆ, ಮಲ್ಲಿಕಾರ್ಜುನ ನಂದಿ, ರಮೇಶ ಸ್ವಾಮಿ, ನಾಗರಾಜ ರೋಜಾ, ಗುರುಲಿಂಗಯ್ಯ ಹುಲಿಕಾಂತಿ ಮಠ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net