ಹುಲಿ ದಾಳಿಗೆ ಕರು ಬಲಿ

Tiger
Published on

ಗೋಣಿಕೊಪ್ಪ: ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರುದ್ರಬೀಡು ಗ್ರಾಮದಲ್ಲಿ ಗುರುವಾರ ರಾತ್ರಿ ಹುಲಿ ದಾಳಿಗೆ ಕರು ಬಲಿಯಾಗಿದ್ದು, ತಿತಿಮತಿ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಾಡತಯ್ಯಪ್ಪ ದೇವಕಾಡು ಸಮೀಪವಿರುವ ಚೆಪ್ಪುಡೀರ ಎಸ್. ಶೈಲ ಎಂಬುವರು ಎಂದಿನಂತೆ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕರುವಿನ ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿದೆ. ಬೇರೆ ಹಸುಗಳು ಕೂಡ ಕೊಟ್ಟಿಗೆಯಲ್ಲಿದ್ದವು. ಹುಲಿ ಸಮೀಪದ ಅರಣ್ಯದಲ್ಲಿ ಸೇರಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ತಿತಿಮತಿ ಎಸಿಎಫ್ ಎಚ್.ಸೀಮಾ, ಆರ್‌ಎಫ್‌ಒ ಅಶೋಕ್ ಪರಿಶೀಲನೆ ನಡೆಸಿದರು. ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಚೆಪ್ಪುಡೀರ ಕೆ. ಪ್ರದೀಪ್ ಪೂವಯ್ಯ, ಪಿಡಿಒ ಗಿರೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net