

ಹುಲಸೂರು: ಬಸವಕಲ್ಯಾಣ ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರ ಆಗುತ್ತಿದ್ದು, ಅದನ್ನು ವೀಕ್ಷಿಸಲು ದೇಶ, ವಿದೇಶದಿಂದ ಪ್ರವಾಸಿಗರು ಆಗಮಿಸುತ್ತಾರೆ. ಅಲ್ಲಿ ಬಂದ ಪ್ರವಾಸಿಗರು ಪಟ್ಟಣಕ್ಕೆ ಬರುವಂತಾಗಲು ಪ್ರವಾಸಿ ಕೇಂದ್ರ ಮಾಡಲು ಎಲ್ಲರ ಶ್ರಮ ಅಗತ್ಯವಾಗಿದೆ ಎಂದು ತಹಸೀಲ್ದಾರ್ ಶಿವಾನಂದ ಮೇತ್ರೆ ಹೇಳಿದರು.
ಪಟ್ಟಣದ ಗಾಂಧಿ ವೃತ್ತದಲ್ಲಿ ಸೋಮವಾರ ತಾಲೂಕು ಆಡಳಿತ ಮತ್ತು ಗ್ರಾಪಂ ವತಿಯಿಂದ ಆಯೋಜಿಸಿದ್ದ ಸ್ವಾತಂತ್ರೃ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಾರಾಷ್ಟ್ರ ಗಡಿ ಭಾಗದ ತಾಲೂಕು ಕೇಂದ್ರ ಆಗಿದ್ದರಿಂದ ಇಲ್ಲಿ ಅಭಿವೃದ್ಧಿ ಮಾಡುವುದು ಅಗತ್ಯವಾಗಿದೆ. ಸಕರ್ಾರ ಗುರುತಿಸಿರುವ ಸ್ಥಳದಲ್ಲಿ ಮಿನಿ ವಿಧಾನಸೌಧ ನಿಮರ್ಿಸಿದರೆ ಜನರಿಗೆ ಮತ್ತು ಸಿಬ್ಬಂದಿ ವರ್ಗಕ್ಕೆ ಅನುಕೂಲ ಆಗಲಿದೆ ಎಂದರು.
ತಾಪಂ ಇಒ ಮಹಾದೇವ ಬಾಬಳಗೆ, ಗ್ರಾಪಂ ಅಧ್ಯಕ್ಷ ಸಂಜುಕುಮಾರ ಭುಸಾರೆ, ಉಪಾಧ್ಯಕ್ಷೆ ಸರಸ್ವತಿ ಬಾಲಕುಂದೆ, ಕಂದಾಯ ನಿರೀಕ್ಷಕ ಮೊನೇಶ್ವರ ಸ್ವಾಮಿ, ಪಿಎಸ್ಐ ನಿಂಗಪ್ಪ ಮಣ್ಣೂರ ಇತರರಿದ್ದರು. ಬಿಇಒ ಸೂರ್ಯಕಾಂತ ಪಾಟೀಲ್ ಸ್ವಾಗತಿಸಿ ನಿರೂಪಣೆ ಮಾಡಿದರು.
ತಾಲೂಕು ಕೇಂದ್ರ ರಚನೆ ಹೋರಾಟ ಸಮಿತಿ ಸಂಚಾಲಕ ಎಂ.ಜಿ.ರಾಜೋಳೆ ಸೇರಿದಂತೆ ಸ್ವಾತಂತ್ರೃ ಹೋರಾಟಗಾರು ಮತ್ತು ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾಥರ್ಿಗಳನ್ನು ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.