

ಹುಲಸೂರು: ಹುಲಸೂರು ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಅಧ್ಯಕ್ಷೆಯಾಗಿ ದೀಪಾರಾಣಿ ಭೋಸ್ಲೆ , ಉಪಾಧ್ಯಕ್ಷೆಯಾಗಿ ಮೀರಾಬಾಯಿ ರಣಜಿತ ಅವರು ಮಂಗಳವಾರ ಅವಿರೋಧವಾಗಿ ಆಯ್ಕೆಯಾಗಿz್ದÁರೆ.
34 ಸದಸ್ಯ ಬಲದ ಗ್ರಾಪಂನಲ್ಲಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ (ಎಸ್‌ಸಿ) ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮೀಸಲಾಗಿತ್ತು. ಎರಡು ಸ್ಥಾನಗಳಿಗೆ ತಲಾ ಒಂದೇ ನಾಮಪತ್ರ ಸಲ್ಲಿಕೆಯಾದ್ದರಿಂದ ಚುನಾವಣಾಧಿಕಾರಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೈಜಣ್ಣ ಫುಲೆ ಫಲಿತಾಂಶ ಘೋಷಿಸಿದರು.
ಫಲಿತಾಂಶ ಘೋಷಣೆ ನಂತರ ಮುಖಂಡರು, ಬೆಂಬಲಿಗರು ವಿಜಯೋತ್ಸವ ಆಚರಿಸಿ ಅಧ್ಯಕ್ಷ,ಉಪಾಧ್ಯಕ್ಷರನ್ನು ಸನ್ಮಾನಿಸಿದರು.
ಗ್ರಾಪಂ ಸದಸ್ಯರಾದ ದೇವೇಂದ್ರ ಭೋಪಳೆ, ವಿವೇಕಾನಂದ ಚಳಕಾಪುರೆ, ವಿದ್ಯಾಸಾಗರ ಬನ್ಸೂಡೆ, ನಾಗೇಶ ಮೇತ್ರೆ, ಮನ್ಸೂರ್ ದಾಬಲಜಿ, ಕುರಮೋದ್ದಿನ್, ಧನರಾಜ ಸೂರ್ಯವಂಶಿ, ನಿತೇಶ ಪಾಟೀಲï, ಕುಮಾರ ಗೋರೆ, ಜಗನ್ನಾಥ ದೇಟ್ನೆ, ವೈಜನಾಥ ಮೇತ್ರೆ, ಸರಸ್ವತಿ ಬಾಲಕುಂದೆ, ಭಾಗ್ಯಶ್ರೀ ಬಾಲಕುಂದೆ, ಮಹಾನಂದಾ ಕಾಡಾದಿ, ತಂಗೆಮ್ಮ, ಬಬಿತಾ, ಡಿಸಿಸಿ ಬ್ಯಾಂಕ್ ನಿರ್ದೇಶಕ ಓಂಕಾರ ಪಟ್ನೆ , ಜಿಪಂ ಮಾಜಿ ಸದಸ್ಯೆ ಶಾಲುಬಾಯಿ ಬನ್ಸೂಡೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಮೇಶ ಮಿಲಿಂದಕರ, ಚಂದ್ರಕಾAತ ದೇಟ್ನೆ, ಪ್ರಲ್ಹಾದ ಮೋರೆ, ರಣಜಿತ ಗಾಯಕವಾಡ, ಹಣಮಂತ ಕುಸೆ, ಶ್ರೀಶೈಲ ಹಾರಕೂಡೆ, ಮಹಾದೇವ ಕೌಟೆ ಇತರರಿದ್ದರು.