

ಹುಮನಾಬಾದ್: ಕ್ಷೇತ್ರದ ಸಾರ್ವಜನಿಕರು ತಮ್ಮ ಕೆಲಸ-ಕಾರ್ಯ, ಸಮಸ್ಯೆಗಳಿದ್ದರೆ ನೇರವಾಗಿ ನನ್ನನ್ನು ಅಥವಾ ಪಟ್ಟಣದಲ್ಲಿರುವ ಶಾಸಕರ ಕಚೇರಿಗೆ ಭೇಟಿ ನೀಡಿ ಗಮನಕ್ಕೆ ತಂದಲ್ಲಿ ಪ್ರಾಮಾಣಿಕವಾಗಿ ಸ್ಪಂದಿಸುವುದಾಗಿ ಎಂಎಲ್‌ಎ ಡಾ.ಸಿದ್ದಲಿಂಗಪ್ಪ ಪಾಟೀಲ್ ಭರವಸೆ ನೀಡಿದರು.
ತಹಸಿಲ್ ಹತ್ತಿರದ ಶಾಸಕರ ಕಚೇರಿಯನ್ನು ಶುಕ್ರವಾರ ಉದ್ಘಾಟಿಸಿದ ಅವರು, ಕಚೇರಿಯಲ್ಲಿ ಕ್ಷೇತ್ರದ ಜನರ ಕುಂದು ಕೊರತೆ ಆಲಿಸುತ್ತೇನೆ. ಅನ್ಯ ಕಾರ್ಯಗಳ ನಿಮಿತ್ತ ಸಿಗದಿದ್ದಾಗ ಸಿಬ್ಬಂದಿ ನಿಮ್ಮ ಬೇಕು-ಬೇಡಗಳಿಗೆ ಸ್ಪಂದಿಸಲಿದ್ದಾರೆ ಎಂದರು.
ಮಾಜಿ ಶಾಸಕ ಸುಭಾಷ ಕಲ್ಲೂರ, ಪ್ರಮುಖರಾದ ಪದ್ಮಾಕರ ಪಾಟೀಲ್, ಬಸವರಾಜ ಆರ್ಯ, ಮಲ್ಲಿಕಾರ್ಜುನ ಸೀಗಿ, ಸಂತೋಷ ಪಾಟೀಲ್, ಸುನೀಲ್ ಪಾಟೀಲ್, ಪ್ರಭಾಕರ ನಾಗರಾಳೆ, ಅಭಿಮನ್ಯು ನಿರಗುಡಿ, ಮಾಣಿಕರಡ್ಡಿ ಕರಣಿ, ವಿನಾಯಕ ಮಂಡಾ, ಕೆ.ಎಂ. ಗಜೇಂದ್ರ, ಗಿರೀಶ ತುಂಬಾ, ವಿಶ್ವನಾಥ ಪಾಟೀಲ್, ನಾಗಭೂಷಣ ಸಂಗಮಕರ, ರಾಜು ಭಂಡಾರಿ, ಜಗನ್ನಾಥ ಪಾಟೀಲ್, ವೈಜನಾಥ ಪಾಟೀಲ್, ಶ್ರೀನಾಥ ದೇವಣಿ, ಡಿ.ಎನ್. ಪತ್ರಿ ಇತರರಿದ್ದರು. ಬಳಿಕ ಕಚೇರಿ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.