ಹುಬ್ಬಳ್ಳಿ&ವಿಜಯಪುರ ಹೆದ್ದಾರಿ ತಡೆದು ಪ್ರತಿಭಟನೆ

WEB LOGO
Published on

ಬಬಲೇಶ್ವರ : ಬೆಳಗಾವಿಯಲ್ಲಿ ನಡೆದಿರುವ ಅಧಿವೇಶನ ಸಂದರ್ಭದಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆಯಲ್ಲಿ ನಿರತರಾಗಿದ್ದ ಪಂಚಮಸಾಲಿ ಸಮಾಜ ಬಾಂಧವರ ಮೇಲೆ ಸೋಮವಾರ ಪೊಲೀಸರು ಲಾಠಿ ಚಾರ್ಜ್​ ಮಾಡಿ, ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡಿದ್ದನ್ನು ಖಂಡಿಸಿ, ಮುಳವಾಡ, ರೋಣಿಹಾಳ, ಕಾರಜೋಳ, ಕುಬಕಡ್ಡಿ, ಕಾಖಂಡಕಿ ಹಾಗೂ ಬಬಲೇಶ್ವರ ಭಾಗದ ಸಮಾಜ ಬಾಂಧವರು ಡಿ. 13ರಂದು ಬೆಳಗ್ಗೆ 10 ಗಂಟೆಗೆ ಹುಬ್ಬಳ್ಳಿ& ಜಯಪುರ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಿದ್ದಾರೆ.

ಬಬಲೇಶ್ವರದ ಬ್ರಹ್ಮಮಠದ ಪೀಠಾಧಿಪತಿ ಹಾಗೂ ಪಂಚಮಸಾಲಿ ಆಲಗೂರು ಪೀಠದ ಮೂರನೇ ಜಗದ್ಗುರು ಡಾ. ಮಹಾದೇವ ಶಿವಾಚಾರ್ಯರು, ವಿಜುಗೌಡ ಎಸ್​. ಪಾಟೀಲ, ಸುರೇಶ ಬಿರಾದಾರ, ವಿ.ಎಸ್​. ಪಾಟೀಲ, ಈರಣ್ಣ ಶಿರಮಗೊಂಡ, ಸ್ಥಳಿಯ ಮುಖಂಡರಾದ ಸಂಗನಗೌಡ ಪಾಟೀಲ, ಬಸವರಾಜ ಸಿದ್ದಾಪುರ, ಸಂತೋಷ ಬಿರಾದಾರ, ಕಲ್ಲನಗೌಡ ಪಾಟೀಲ, ಗಿರೀಶ ಅವಟಿ, ಸದಾನಂದ ಇಂಡಿ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net