

ಹುಬ್ಬಳ್ಳಿ: ಇಲ್ಲಿಯ ಅಂಬೇಡ್ಕರ್ ವೃತ್ತದಲ್ಲಿ ಸಾಂಕೇತಿಕವಾಗಿ ಕಸಗುಡಿಸುವ ಮೂಲಕ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಹು-ಧಾ ಪೂರ್ವ ವಿಧಾನಸಭೆ ಕ್ಷೇತ್ರದ ಪೊರಕೆಯೇ ಪರಿಹಾರ ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಿದರು.
ಪೂರ್ವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಬಸವರಾಜ ತೇರದಾಳ ನೇತೃತ್ವ ವಹಿಸಿದ್ದರು. ಬಳಿಕ ಗಣೇಶ ಪೇಟ ವೃತ್ತ, ಸಿಬಿಟಿ, ದುರ್ಗದ ಬೈಲ್ ವೃತ್ತ, ನೇಕಾರ ನಗರ ವೃತ್ತ ಮುಖಾಂತರ ಹಳೇ ಹುಬ್ಬಳ್ಳಿ ವೃತ್ತದ ಸುತ್ತಮುತ್ತ ಬೈಕ್ ರ‍್ಯಾಲಿ ನಡೆಸಿದರು. ಭ್ರಷ್ಟಾಚಾರಕ್ಕ ಹೊಡಿ ಪೊರಕೆ, ಹದಗೆಟ್ಟ ರಸ್ತೆಗೆ ಹೊಡಿ ಪೊರಕೆ, ಶೇ. 40 ಕಮಿಷನ್ಗೆ ಹೊಡಿ ಪೊರಕೆ, ದೇಶ ಲೂಟಿ ಮಾಡುತ್ತಿರುವ ಜೆಸಿಬಿಗೆ ಹೊಡಿ ಪೊರಕೆ... ಎಂಬಿತ್ಯಾದಿ ಘೊಷಣೆಗಳನ್ನು ಕೂಗಿದರು.
ಅಭಿಯಾನದಲ್ಲಿ ಜಿಲ್ಲಾಧ್ಯಕ್ಷ ಅನಂತಕುಮಾರ ಬುಗಡಿ, ರೇವಣಸಿದ್ದಪ್ಪ ಹುಬ್ಬಳ್ಳಿ, ಲಕ್ಷ್ಮೀನಾರಾಯಣ, ರೂಪ ಮಾಲ್ವದೆ, ಹುಸೇನ್ ಬಾಷಾ ತಳೇವಾಡ, ದುರ್ಗಾಜಿ ಜಾಧವ, ವಿಶ್ವನಾಥ ಕರಡಿಗುಡ್ಡ ಮತ್ತಿತರರು ಇದ್ದರು.
I,