

ಹುಬ್ಬಳ್ಳಿ: ರಾಜ್ಯ ಸರ್ಕಾರ ಹುಬ್ಬಳ್ಳಿಯಲ್ಲಿ ತಾರಾಲಯ (ಪ್ಲಾನೆಟೋರಿಯಮ್ ನಿರ್ವಣಕ್ಕೆ ಮುಂದಾದಲ್ಲಿ ಅಗತ್ಯ ಆರ್ಥಿಕ ನೆರವು ಒದಗಿಸಲಾಗುವುದು ಎಂದು ಸ್ವರ್ಣಾ ಗ್ರುಪ್ ಆಪ್ ಕಂಪನೀಸ್ನ ಎಂಡಿ ಡಾ. ವಿ.ಎಸ್. ವಿ. ಪ್ರಸಾದ ತಿಳಿಸಿದ್ದಾರೆ.
ಬಾಹ್ಯಾಕಾಶ ಸಂಶೋಧನೆಯಲ್ಲಿ ಮಹತ್ವದ ಹೆಜ್ಜೆಯಾದ ಇಸ್ರೋದ ಚಂದ್ರಯಾನ-3 ಉಪಗ್ರಹದ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವಂಥ ಕ್ಷಣವನ್ನು ಕಣ್ತುಂಬಿಕೊಳ್ಳಲು ತಾರಾಲಯದ ಅಗತ್ಯವಿದೆ. ಹುಬ್ಬಳ್ಳಿಯಲ್ಲಿ ತಾರಾಲಯ ಇಲ್ಲದೆ ಆಸಕ್ತರು ನಿರಾಸೆ ಅನುಭವಿಸಿದ್ದಾರೆ. ಈ ಕೊರತೆಯನ್ನು ನೀಗಿಸಲು ರಾಜ್ಯ ಸರ್ಕಾರ ಹುಬ್ಬಳ್ಳಿಯಲ್ಲಿ ತಾರಾಲಯ ನಿರ್ವಣಕ್ಕೆ ಮುಂದಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇಸ್ರೋದ ಚಂದ್ರಯಾನ-3 ಉಪಗ್ರಹದ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಕ್ಷಣವನ್ನು ನಾವೆಲ್ಲ ಕಾತರದಿಂದ ಕಾಯುತ್ತಿದ್ದೇವೆ. ಐತಿಹಾಸಿಕ ಈ ಕ್ಷಣಕ್ಕೆ ನಾವೆಲ್ಲ ಹೆಮ್ಮೆ ಪಡೋಣ ಎಂದು ಹೇಳಿದ್ದಾರೆ.