

ಹುಬ್ಬಳ್ಳಿ: ಟೈ ಹುಬ್ಬಳ್ಳಿ ಶಾಖೆ ವರ್ಚುವಲ್ ವೇದಿಕೆಯಲ್ಲಿ ಆಯೋಜಿಸಿದ್ದ ಉದ್ಯಮ ಸಮ್ಮೇಳನಕ್ಕೆ ಶನಿವಾರ ಚಾಲನೆ ದೊರೆತಿದ್ದು, ಮೊದಲ ದಿನದ ಮಹಿಳಾ ಸಮಾವೇಶವನ್ನು 12 ಸಾವಿರಕ್ಕಿಂತ ಹೆಚ್ಚು ಜನ ವೀಕ್ಷಿಸಿದರು.
ಅತಿಥಿಗಳಾಗಿ ಪಾಲ್ಗೊಂಡ ಫೆಮಿನಾ ಮತ್ತು ಹಲೋ ಮ್ಯಾಗಜಿನ್ ಸಂಪಾದಕಿ ರುಚಿಕಾ ಮೆಹ್ತಾ ಅವರು ‘ಮಹಿಳೆ ಮತ್ತು ಕನಸುಗಳು’ ಕುರಿತು; ಪಾರ್ಕ್ ಹೋಟೆಲ್ಸ್ ಅಧ್ಯಕ್ಷೆ ಪ್ರಿಯಾ ಪೌಲ್ ಅವರು ‘ಉದ್ಯಮಶೀಲತೆಯಲ್ಲಿ ವೈಭವ ಸಾಧನೆ’ ಕುರಿತು; ಕ್ರೀಡಾ ಸಾಧಕಿ ಡಾ. ಕೋಮಲ ರಾವ್ ಅವರು ‘ಪ್ರತಿಕೂಲ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ’ ವಿಷಯವಾಗಿ ಹಾಗೂ ಬ್ರಿಗೇಡ್ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕಿ ನಿರುಪಮಾ ಶಂಕರ ಅವರು ‘ನವಭಾರತ ನಿರ್ವಣದಲ್ಲಿ ಮೂಲಸೌಕರ್ಯದ ಪಾತ್ರ’ ಕುರಿತು ಅಭಿಪ್ರಾಯ ಹಂಚಿಕೊಂಡರು. ಟೈ ಪುಣೆ ಸದಸ್ಯರಿಂದ 3 ಮಾಸ್ಟರ್ಕ್ಲಾಸ್ ಅಧಿವೇಶನ ನಡೆದವು. 16 ಸ್ಟಾರ್ಟಪ್ಗಳನ್ನು ಸಾದರಪಡಿಸಿದ್ದು, ಅವುಗಳಲ್ಲಿ ಉತ್ತರ ಕರ್ನಾಟಕದ ಸಾಯ್್ಲ ಮಂತ್ರ, ಡಾಕೆಟ್ ರನ್ ಮತ್ತು ಕೆಮಿಯಾಪ್ಟಿಕ್ ಸಹ ಸೇರಿವೆ. ಅತಿಥಿಗಳ ಮಾತಿನ ಮಧ್ಯೆ ಹುಬ್ಬಳ್ಳಿ ಖಾದಿ ಗ್ರಾಮೋದ್ಯೋಗದ ರಾಷ್ಟ್ರಧ್ವಜ ತಯಾರಿಕಾ ಘಟಕ ಸೇರಿದಂತೆ ಉತ್ತರ ಕರ್ನಾಟಕದ ವಿಶೇಷತೆಗಳ ವಿಡಿಯೋ ಮಾಹಿತಿ ನೀಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳೂ ಜರುಗಿದವು.
ಟೈಕಾನ್ದಲ್ಲಿಂದು: ಫೆ. 28ರ ಉದ್ಯಮಶೀಲರ ಸಮ್ಮೇಳನದಲ್ಲಿ, ‘ಉ.ಕ.-ನವ ಭಾರತದಲ್ಲಿ ಮಿನುಗು ತಾರೆ’ ಎಂಬ ಕುರಿತು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅಭಿಪ್ರಾಯ ಹಂಚಿಕೊಳ್ಳುವರು. ಅಂತಾರಾಷ್ಟ್ರೀಯ ಖ್ಯಾತಿಯ ಉದ್ಯಮಿ ಡಾ. ಗುರುರಾಜ ದೇಶಪಾಂಡೆ, ಮಾಜಿ ಸಚಿವ ಕೃಷ್ಣ ಬೈರೇಗೌಡ, ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಸಿನಿಮಾ ಸಾಹಿತಿ ಪರ್ವೀಝå್ ಶೇಖ್, ಸಾಂಕ್ರಾಮಿಕ ರೋಗ ತಜ್ಞ ಡಾ. ಗೌತಮ ಬನ್ಸಾಲಿ, ಖ್ಯಾತ ಅಥ್ಲೀಟ್ ಮಿಲ್ಖಾ ಸಿಂಗ್, ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ, ಮಾಜಿ ಕ್ರಿಕೆಟಿಗ ಸುನೀಲ ಜೋಶಿ, ಜೆಎಸ್ಡಬ್ಲ್ಯು ಸಮೂಹದ ಸಿಎಂಡಿ ಸಜ್ಜನ ಜಿಂದಾಲ್, ಶೈಕ್ಷಣಿಕ ಸುಧಾರಕ ಸೋನಮ್ ವಾಂಗ್ಚುಕ್ ಅವರು ವಿವಿಧ ವಿಷಯಗಳು ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.