

ಹುಬ್ಬಳ್ಳಿ: ಬೆಂಗಳೂರು ಸೇರಿ ಬೇರೆ ಬೇರೆ ಕಡೆ ಕೆಲಸಕ್ಕೆ ತೆರಳಿದ್ದ ಧಾರವಾಡ ಜಿಲ್ಲೆಯ 618 ಕಾರ್ವಿುಕರು ಸೋಮವಾರ ವಾಪಸ್ ಬಂದಿದ್ದಾರೆ. ಅದೇ ರೀತಿ ಲಾಕ್ಡೌನ್ನಿಂದಾಗಿ ಇಲ್ಲಿಯೇ ಉಳಿದಿದ್ದ 198 ಕಾರ್ವಿುಕರನ್ನು ಅವರ ಊರಿಗೆ ಕಳುಹಿಸಲಾಯಿತು.
ಸೋಮವಾರ ಬೆಳಗ್ಗೆ 5.30ರ ವರೆಗೆ ವಿವಿಧೆಡೆಯಿಂದ 24 ಬಸ್ಗಳಲ್ಲಿ 618 ಪ್ರಯಾಣಿಕರು ನಗರಕ್ಕೆ ಆಗಮಿಸಿದರು. ಬಂದವರನ್ನು ಪ್ರಾಥಮಿಕ ತಪಾಸಣೆಗೆ ಒಳಪಡಿಸಲಾಯಿತು. ದೇಹದ ಉಷ್ಣತೆ (ಥರ್ಮಲ್) ಪರೀಕ್ಷಿಸಿ ಅನುಮಾನ ಬಂದವರನ್ನು ಹೆಚ್ಚಿನ ಪರೀಕ್ಷೆಗೊ ಳಪಡಿಸಲಾಯಿತು.ಹೊರಗಿನಿಂದ ಬಂದ ಎಲ್ಲರಿಗೂ ಕೈ ಮೇಲೆ ಸೀಲ್ ಹಾಕಿ ಹೋಮ್ ಕ್ವಾರಂಟೈನ್ಗೆ ಸೂಚಿಸಿ ಮನೆಗೆ ಕಳುಹಿಸಿಕೊಡಲಾಯಿತು.
ಊರಿಗೆ ಮರಳಿದ 198 ಜನ: ರಾಜ್ಯದ ಇತರೆಡೆಯಿಂದ ಹುಬ್ಬಳ್ಳಿಗೆ ಆಗಮಿಸಿದ್ದ ವಲಸೆ ಕಾರ್ವಿುಕರು ಸೇರಿ ಪ್ರವಾಸಿಗರು, ಯಾತ್ರಿಗಳು ಹಾಗೂ ವಿದ್ಯಾರ್ಥಿಗಳಿಗೆ ಅವರ ಊರುಗಳಿಗೆ ತೆರಳಲು ಜಿಲ್ಲಾಡಳಿತದಿಂದ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಯಿತು. ಹುಬ್ಬಳ್ಳಿ ಹೊಸ ಬಸ್ ನಿಲ್ದಾಣದಿಂದ ಒಟ್ಟು 7 ಬಸ್ಗಳಲ್ಲಿ 198 ಜನರು ತಮ್ಮ ಊರುಗಳಿಗೆ ಮರಳಿದರು. ಬೆಂಗಳೂರು-2, ಕಲಬುರ್ಗಿ, ಬೀದರ್, ಅಫಜಲಪುರ, ರಾಯಚೂರು ಮಾರ್ಗಗಳಲ್ಲಿ ತಲಾ ಒಂದರಂತೆ ಬಸ್ ಮೂಲಕ ಪ್ರಯಾಣಿಕರನ್ನು ಕಳುಹಿಸಲಾಯಿತು.
ಉಪವಿಭಾಗಾಧಿಕಾರಿ ಮಹಮದ್ ಜುಬೇರ್, ತಹಸೀಲ್ದಾರರಾದ ಶಶಿಧರ ಮಾಡ್ಯಾಳ, ಪ್ರಕಾಶ ನಾಶಿ, ವಾಯವ್ಯ ಸಾರಿಗೆ ಸಂಸ್ಥೆಯ ಎಚ್.ಆರ್. ರಾಮನಗೌಡರ, ಅಶೋಕ ಪಾಟೀಲ ಇತರರ ನೇತೃತ್ವದಲ್ಲಿ ಪ್ರಯಾಣಿಕರನ್ನು ಬೀಳ್ಕೊಡಲಾಯಿತು. ಮೊದಲ ಬಸ್ ಮಧ್ಯಾಹ್ನ 2.30ರ ವೇಳೆಗೆ ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣದಿಂದ ಬೆಂಗಳೂರಿನತ್ತ ತೆರಳಿತು. ಅದರಲ್ಲಿ 25 ಪ್ರಯಾಣಿಕರು ಇದ್ದರು. ಪ್ರತಿ ಮಾರ್ಗದಲ್ಲಿ 30 ಜನ ಪ್ರಯಾಣಿಕರ ನೋಂದಣಿಯಾದ ಕೂಡಲೆ ಬಸ್ ಬಿಡಲಾಯಿತು. ವಲಸೆ ಕಾರ್ವಿುಕರು, ಯಾತ್ರಿಗಳು, ಪ್ರವಾಸಿಗರು, ವಿದ್ಯಾರ್ಥಿಗಳಿಗೆ ಹೊಸ ಬಸ್ ನಿಲ್ದಾಣದಲ್ಲಿ ನೋಂದಣಿ, ತಪಾಸಣೆ ಮಾಡಲಾಯಿತು.
ಧಾರವಾಡ ಬಸ್ ನಿಲ್ದಾಣಕ್ಕೆ ಜಿಲ್ಲಾಧಿಕಾರಿ ದೀಪಾ ಚೋಳನ್ ಭೇಟಿ: ಜಿಲ್ಲಾಧಿಕಾರಿ ದೀಪಾ ಚೋಳನ್ ಧಾರವಾಡ ನಗರದ ಹೊಸ ಬಸ್ ನಿಲ್ದಾಣಕ್ಕೆ ಸೋಮವಾರ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು.
ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಹಡಗಲಿಗೆ ತೆರಳಬೇಕಿದ್ದ 20ಕ್ಕೂ ಹೆಚ್ಚು ಕಾರ್ವಿುಕರು ಲಾಕ್ಡೌನ್ ಜಾರಿಯಾದಾಗಿನಿಂದ ನಿಗದಿ ಗ್ರಾಮದಲ್ಲಿ ಸ್ಥಗಿತವಾಗಿದ್ದರು. ಅವರ ಪ್ರತಿನಿಧಿ ಮೋಹನ ಗಲಗಲಿ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಅಹವಾಲು ಸಲ್ಲಿಸಿದ್ದರು. ಸ್ಪಂದಿಸಿದ ಜಿಲ್ಲಾಧಿಕಾರಿ ಕೂಡಲೆ ಕಲಬುರಗಿ ಕಾರ್ವಿುಕರಿಗೆ ವಾಹನ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು. ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ. ಎಸ್.ಎಂ. ಹೊನಕೇರಿ, ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ಎನ್.ಆರ್. ಪುರುಷೋತ್ತಮ, ಧಾರವಾಡ ತಹಸೀಲ್ದಾರ್ ಸಂತೋಷಕುಮಾರ ಬಿರಾದಾರ, ಕಾರ್ವಿುಕ ಅಧಿಕಾರಿಗಳಾದ ಮಾರಿಕಾಂಬಾ, ಅಶೋಕ ಬಾಳಿಗಟ್ಟಿ, ವಾಕರಸಾಸಂ ವಿಭಾಗೀಯ ನಿಯಂತ್ರಕ ಬಸವಲಿಂಗಪ್ಪ ಬೀಡಿ, ಇತರರಿದ್ದರು. ಸೋಮವಾರ ಧಾರವಾಡದಿಂದ 7 ಬಸ್ಗಳ ಮೂಲಕ 180 ಜನರು ತೆರಳಿದರು.</