ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾಗಿ ಹರ್ಷ

h13-Harsha Rail
????????????????????????????????????
Published on

ಹುಬ್ಬಳ್ಳಿ : ಹುಬ್ಬಳ್ಳಿ ವಿಭಾಗೀಯ ನೂತನ ರೈಲ್ವೆ ವ್ಯವಸ್ಥಾಪಕರಾಗಿ ಹರ್ಷ ಖರೆ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು.
ಈ ಮೊದಲು ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾಗಿದ್ದ ಅರವಿಂದ ಮಾಲಖೇಡೆ ಅವರು ವರ್ಗಗೊಂಡ ಹಿನ್ನೆಲೆಯಲ್ಲಿ ಹರ್ಷ ಖರೆ ಅಧಿಕಾರ ವಹಿಸಿಕೊಂಡರು. ಅರವಿಂದ ಮಾಲಖೇಡೆ ಅವರು ಹರ್ಷ ಖರೆ ಅವರಿಗೆ ಅಧಿಕಾರ ಹಸ್ತಾಂತರಿಸಿ, ಶುಭ ಕೋರಿದರು.
ಹರ್ಷ ಖರೆ ಅವರು ಭಾರತೀಯ ರೈಲ್ವೆಯ ಇಲೆಕ್ಟ್ರಿಕಲ್​ ಇಂಜಿನಿಯರ್ಸ್​ ಸೇವೆಯ 1991ನೇ ಬ್ಯಾಚ್​ನ ಅಧಿಕಾರಿಯಾಗಿದ್ದಾರೆ. ಹುಬ್ಬಳ್ಳಿಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಹುದ್ದೆಯನ್ನು ವಹಿಸಿಕೊಳ್ಳುವುದಕ್ಕೆ ಮೊದಲು ಅವರು ಪ್ರಯಾಗರಾಜ್​ ನ ಕೇಂದ್ರೀಯ ರೈಲ್ವೆ ವಿದ್ಯುದಿಕರಣ ಸಂಘಟನೆಯಲ್ಲಿ ಮುಖ್ಯ ವಿದ್ಯುತ್​ ಇಂಜಿನಿಯರ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net