ಹುಬ್ಬಳ್ಳಿ ವಿಭಾಗದಿಂದ ಪಾರ್ಸೆಲ್ ರೈಲುಗಳ ಸಂಚಾರ

h26-Parcel Rail
Published on

ಹುಬ್ಬಳ್ಳಿ: ಕೈಗಾರಿಕೋದ್ಯಮಿಗಳು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ತಮ್ಮ ಉತ್ಪನ್ನಗಳನ್ನು ದೇಶದ ವಿವಿಧ ನಗರಗಳಿಗೆ ತಲುಪಿಸಲು ಪೂರಕವಾಗಿ ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿ ವಿಭಾಗದಿಂದ ಪಾರ್ಸೆಲ್ ವಿಶೇಷ ರೈಲುಗಳ ಸಂಚಾರ ಪ್ರಾರಂಭಿಸಿದೆ.

ಲಾಕ್ ಡೌನ್​ನ ಈ ದಿನಗಳಲ್ಲಿ ದೇಶದ ಒಂದು ಭಾಗದಿಂದ ಇತರ ಭಾಗಗಳಿಗೆ ಉತ್ಪನ್ನಗಳನ್ನು ತಲುಪಿಸಲು ಪಾರ್ಸೆಲ್ ರೈಲುಗಳು ಹೆಚ್ಚು ಸಹಕಾರಿಯಾಗಿವೆ.

ಹುಬ್ಬಳ್ಳಿ ವಿಭಾಗದ ಗೋವಾದಿಂದ ದಿವಾನಾವರೆಗೆ 4 ಪಾರ್ಸಲ್ ರೈಲುಗಳಲ್ಲಿ 75.26 ಟನ್ ನೂಡಲ್ಸ್ ಅನ್ನು ಸಾಗಿಸಲಾಗಿದೆ.

ಮತ್ತೊಂದು ರೆಫ್ರಿಜಿರೇಟರ್ ಪಾರ್ಸೆಲ್ ರೈಲಿನಲ್ಲಿ ವಾಸ್ಕೊ ಡ ಗಾಮಾದಿಂದ ದಿವಾನಾವರೆಗೆ ನೆಸ್ಲೆ ಚಾಕೊಲೇಟ್ ಸಾಗಿಸಲಾಗಿದೆ.

ಶನಿವಾರ ಸಹ ಒಂದು ರೆಫ್ರಿಜಿರೇಟರ್ ಸರಕು ಸಾಗಣೆ ರೈಲು ಸೇರಿದಂತೆ 15 ರೈಲುಗಳು ಬೆಂಗಳೂರಿನಿಂದ ಹೌರಾ, ದಿಮಾಪುರ ಮತ್ತು ವಾಸ್ಕೊ ಡ ಗಾಮಾದಿಂದ ದಿವಾನಾದತ್ತ ಅಗತ್ಯ ಸಾಮಗ್ರಿಗಳೊಂದಿಗೆ ಸಂಚರಿಸಿವೆ.

ವಾಸ್ಕೊ ಡ ಗಾಮಾದಿಂದ ದಿವಾನಾದತ್ತ ಸಂಚರಿಸಿದ ರೆಫ್ರಿಜಿರೇಟರ್ ರೈಲು 15.38 ಟನ್ ಚಾಕೊಲೇಟ್ (ಕಿಟ್ ಕ್ಯಾಟ್, ಬಾರ್ ಒನ್, ಮಿಲ್ಕಿ ಬಾರ್) ಚಾಕೊಲೇಟ್ ಹೊತ್ತು ಸಾಗಿದೆ. ಈ ರೈಲು 2,400 ಕಿಮೀ ಪ್ರಯಾಣಿಸಿ ಮೆ. ಎವಿಜಿ ಲಾಜಿಸ್ಟಿಕ್ಸ್ ಗೆ ಚಾಕೊಲೇಟ್ ತಲುಪಿಸಲಿದೆ.

75.26 ಟನ್​ನಷ್ಟು ಆಹಾರ ಸಾಮಗ್ರಿಗಳನ್ನು ಒಳಗೊಂಡ ಮತ್ತೊಂದು ರೈಲು ದಿವಾನಾದತ್ತ ಪ್ರಯಾಣಿಸಲು ಸಿದ್ಧವಾಗಿದೆ ಎಂದು ಪ್ರಕಟಣೆ ತಿಳಿಸಿದೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net