ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಪ್ರಿಪೇಯ್್ಡ ಆಟೋ ಸೌಲಭ್ಯ

h10-Pre Paid Auto 2
Published on

ಹುಬ್ಬಳ್ಳಿ: ಕಿಯೊಸ್ಕ್ ಆಶ್ರಯದಲ್ಲಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಪ್ರಿಪೇಯ್್ಡ ಆಟೋ ಸೌಲಭ್ಯಕ್ಕೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ ಮಳಖೇಡೆ ಶುಕ್ರವಾರ ಚಾಲನೆ ನೀಡಿದರು.

ರೈಲ್ವೆ ಪ್ರಯಾಣಿಕರಿಂದ ಕೆಲ ಆಟೋ ಚಾಲಕರು ಹೆಚ್ಚಿನ ಬಾಡಿಗೆ ಶುಲ್ಕ ಪಡೆಯುತ್ತಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ನಗರ ಹಾಗೂ ಸುತ್ತಲಿನ ಪ್ರದೇಶಗಳಿಗೆ ರೈಲ್ವೆ ನಿಲ್ದಾಣದಿಂದ ಪ್ರಿಪೇಯ್್ಡ ಆಟೋ ಕಾರ್ಯ ಪ್ರಾರಂಭಿಸಲಾಯಿತು.

ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಡಾ. ಸೆಂತಿಲ್ ಕುಮಾರ, ಆರ್​ಪಿಎಫ್ ವಿಭಾಗೀಯ ಭದ್ರತಾ ಆಯುಕ್ತ ವಲ್ಲೆಶ್ವರ ಥೊಕ್ಲಾ, ಬೆಂಗಳೂರಿನ ಪ್ರಿಪೇಯ್್ಡ ಆಟೋ/ಟ್ಯಾಕ್ಸಿ ಸರ್ವಿಸ್ ಅಧ್ಯಕ್ಷ ಬಿ. ಚಂದ್ರಶೇಖರ ಮತ್ತಿತರರು ಉಪಸ್ಥಿತರಿದ್ದರು.

ನಗರ ವ್ಯಾಪ್ತಿಯ ವಿವಿಧ ಪ್ರದೇಶಗಳಿಗೆ ಆಟೊ ಸೇವೆಗೆ ದರ ನಿಗದಿಪಡಿಸಲಾಗಿದೆ. ಪ್ರಯಾಣಿಕರು ನಿಗದಿತ ಹಣ ಪಾವತಿಸುವ ಮೂಲಕ ಹೆಚ್ಚುವರಿ ಹಣ ನೀಡುವುದು ತಪು್ಪತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net