ಹುಬ್ಬಳ್ಳಿ ಮಿನಿ ವಿಧಾನಸೌಧದಲ್ಲಿ ಮತದಾನ

H28 Mini Vidhanasoudha 1
Published on

ಹುಬ್ಬಳ್ಳಿ: ಇಲ್ಲಿನ ಮಿನಿ ವಿಧಾನಸೌಧ ಆವರಣದಲ್ಲಿ ಬುಧವಾರ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನ ಶಾಂತಿಯುತವಾಗಿ ನೆರವೇರಿತು. ಬೆಳಗ್ಗೆ ಮತ ಚಲಾಯಿಸುವವರ ಸಂಖ್ಯೆ ಕಡಿಮೆ ಇತ್ತಾದರೂ ಮಧ್ಯಾಹ್ನದ ನಂತರ ಬಿರುಸುಗೊಂಡಿತ್ತು. ಆರೋಗ್ಯ ಇಲಾಖೆ ಸಿಬ್ಬಂದಿ ಮತದಾರರ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಸ್ಯಾನಿಟೈಸರ್ ಹಾಕಿ ಮತಗಟ್ಟೆಗೆ ಕಳುಹಿಸಿದರು. ಹಲವು ಮತದಾರರು ಪರಸ್ಪರ ಅಂತರ ಇಲ್ಲದೇ ಒಬ್ಬರಿಗೊಬ್ಬರು ಅಂಟಿಕೊಂಡು ನಿಂತಿದ್ದು ಕಂಡು ಬಂತು. ಛಬ್ಬಿ, ಶಿರಗುಪ್ಪಿ ವ್ಯಾಪ್ತಿಯ ಮತದಾರರು ಮತ ಚಲಾಯಿಸಿದರು. ಮಹಿಳೆಯೊಬ್ಬರು 6 ತಿಂಗಳ ಹಸುಗೂಸಿನೊಂದಿಗೆ ಆಗಮಿಸಿ ಮತ ಚಲಾಯಿಸಿದ್ದು ವಿಶೇಷವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net