ಹುಬ್ಬಳ್ಳಿ ಪಿಎಫ್ ಕಚೇರಿ ಸಾಧನೆ, ವರ್ಷದಲ್ಲಿ 120 ಪಿಪಿಒ ವಿತರಣೆ

PF Prayas
Published on

ಹುಬ್ಬಳ್ಳಿ: ನಿವೃತ್ತಿ ದಿನದಂದೇ ಪಿಂಚಣಿ ಪ್ರಮಾಣ ಪತ್ರ (ಪಿಪಿಒ) ನೀಡುವ ಮಹತ್ವದ ಯೋಜನೆ ‘ಪ್ರಯಾಸ’ ಅಡಿಯಲ್ಲಿ ಮಾರ್ಚ್​ನಲ್ಲಿ ನಿವೃತ್ತರಾದ ಏಳು ಜನರಿಗೆ ಶುಕ್ರವಾರ ಇಲ್ಲಿನ ನವನಗರದ ಪ್ರಾದೇಶಿಕ ಪಿಎಫ್ ಕಚೇರಿಯಲ್ಲಿ ಪಿಪಿಒ ವಿತರಣೆ ಮಾಡಲಾಯಿತು.

ಪ್ರಯಾಸ ಕಾರ್ಯಕ್ರಮಕ್ಕೆ ಹಾಜರಾದ ಶಿವಪ್ಪ ಜಾಲಿಗಿಡದ, ಪ್ರೇಮಾ ಅವರಾದಿ, ಸಿದ್ದಪ್ಪ ಬಾಳಪ್ಪ, ನಾಗರಾಜ ಹಬ್ಬು, ಉಮೇಶ ನಾಯ್ಕ ಅವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಸಹಾಯಕ ಪಿಎಫ್ ಆಯುಕ್ತ ಬಿಜಯ ಪ್ರಸಾದ, ಅಕೌಂಟ್ಸ್ ಆಫೀಸರ್ ಫಣಿ ಸಿನ್ಹಾ, ಲೆಕ್ಕಪತ್ರ ವಿಭಾಗದ ಮೇಲ್ವಿಚಾರಕ ಕೆ. ಯುವರಾಜ, ಸಿಬ್ಬಂದಿ ಉಪಸ್ಥಿತರಿದ್ದರು.

ಹುಬ್ಬಳ್ಳಿ ಪ್ರಾದೇಶಿಕ ಕಚೇರಿಯು ಒಂದೇ (2022-23) ವರ್ಷದಲ್ಲಿ 120 ಪಿಪಿಒಗಳನ್ನು ನೀಡುವ ಮೂಲಕ ದಾಖಲೆ ಬರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net