ಹುಬ್ಬಳ್ಳಿ ಜೆಜಿ ವಾಣಿಜ್ಯ ಕಾಲೇಜಿಗೆ ಎ ++ ಮಾನ್ಯತೆ

h12-JG commerce
Published on

ಹುಬ್ಬಳ್ಳಿ : ನಗರದ ಕೆಎಲ್​ಇ ಸಂಸ್ಥೆಯ ಜಗದ್ಗುರು ಗಂಗಾಧರ ವಾಣಿಜ್ಯ ಕಾಲೇಜಿಗೆ ಯುಜಿಸಿ (ವಿಶ್ವವಿದ್ಯಾಲಯಗಳ ಅನುದಾನ ಆಯೋಗ) ನ್ಯಾಕ್ ಪೀರ್ ಮಂಡಳಿಯು ಎ ++ ಮಾನ್ಯತೆ ಪ್ರಕಟಿಸಿದೆ. ಈ ಶ್ರೇಣಿಯ ಮಾನ್ಯತೆಯನ್ನು ಗಳಿಸಿದ ಉತ್ತರ ಕರ್ನಾಟಕದ ಏಕೈಕ ಕಾಲೇಜ್ ಎಂಬ ಹೆಗ್ಗೆಳಿಕೆ ನಮ್ಮದಾಗಿದೆ ಎಂದು ಸಂಸ್ಥೆಯ ಹಿರಿಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 22 ಹಾಗೂ 23ರಂದು ನ್ಯಾಕ್ ಪೀರ್ ಮಂಡಳಿಯು ಕಾಲೇಜಿನ ಶೈಕ್ಷಣಿಕ ಮೌಲ್ಯಮಾಪನ ನಡೆಸಿತ್ತು. ಅವರ ಪ್ರಕಾರ ಸಿಜಿಪಿಎ-3.53 ಗಳಿಸಿದ್ದು, ಎ ++ ಮಾನ್ಯತೆಗೆ ಅರ್ಹರಾಗಿದ್ದೇವೆ. ಮಂಡಳಿಯಲ್ಲಿ ಚನ್ನೈ, ತೆಲಂಗಾಣ ಹಾಗೂ ಒಡಿಸ್ಸಾದ ಪ್ರತಿನಿಧಿಗಳು ಇದ್ದರು ಎಂದರು.

ಮಂಡಳಿಯು ಮಾನ್ಯತೆ ನೀಡುವಾಗ ಕಾಲೇಜಿನ ಕಟ್ಟಡ, ಪ್ರಯೋಗಾಲಯ, ಗ್ರಂಥಾಲಯವನ್ನಷ್ಟೇ ನೋಡುವುದಿಲ್ಲ. ಗುಣಮಟ್ಟದ ಶಿಕ್ಷಣ, ಬೋಧನೆ, ಪಾಲಕರ ಸಹಕಾರ, ಆಡಳಿತ ಮಂಡಳಿಯ ಸ್ಪಂದನೆ, ಎಲ್ಲವನ್ನೂ ಗಮನಿಸುತ್ತದೆ. ಭೇಟಿ ವೇಳೆ ಹಳೇ ವಿದ್ಯಾರ್ಥಿಗಳು ಸೇರಿ ಎಲ್ಲರೊಂದಿಗೆ ಸಭೆ ನಡೆಸಿದ್ದರು. ನಮ್ಮಲ್ಲಿ ಎ + ಮಾನ್ಯತೆಯ 3 ಕಾಲೇಜ್​ಗಳಿವೆ. ಎ ++ ಮಾನ್ಯತೆಯ ಏಕೈಕ ಕಾಲೇಜ್ ಇದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net