ಹುಬ್ಬಳ್ಳಿ ಉದ್ಯಮಿ ಪ್ರದೀಪ ರಾಯ್ಕರ್ ಕ್ರೆಡೈ ಕರ್ನಾಟಕ ಅಧ್ಯಕ್ಷ

h8-CREDAI Karnataka
Published on

ಹುಬ್ಬಳ್ಳಿ: ಕ್ರೆಡೈ (ಸಿಆರ್​ಇಡಿಎಐ-ಭಾರತೀಯ ರಿಯಲ್ ಎಸ್ಟೇಟ್ ಡೆವಲಪರ್ಸ್ ಸಂಘಗಳ ಒಕ್ಕೂಟ) ಕರ್ನಾಟಕ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹುಬ್ಬಳ್ಳಿ ಉದ್ಯಮಿ ಪ್ರದೀಪ ರಾಯ್ಕರ್ ಅವರ ಅಧಿಕಾರ ಸ್ವೀಕಾರ ಸಮಾರಂಭ ಜೂ. 10 ರಂದು ಸಂಜೆ 6 ಗಂಟೆಗೆ ಹೊಟೇಲ್ ಡೆನಿಸನ್ಸ್ನಲ್ಲಿ ಆಯೋಜಿಸಲಾಗಿದೆ ಎಂದು ಕ್ರೆಡೈ ಹುಬ್ಬಳ್ಳಿ-ಧಾರವಾಡ ಚೇರಮನ್ ಸುರೇಶ ಶೇಜವಾಡಕರ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಎರಡನೇ ಸ್ತರದ ನಗರದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಕ್ರೆಡೈ ಅಧ್ಯಕ್ಷರಾಗಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ. ಬೆಂಗಳೂರೇತರರು ಇದೇ ಮೊದಲ ಬಾರಿಗೆ ಕ್ರೆಡೈ ಕರ್ನಾಟಕ ಅಧ್ಯಕ್ಷರಾಗಿರುವುದು ವಿಶೇಷ. ಆ ಕಾರಣಕ್ಕೆ ಹುಬ್ಬಳ್ಳಿಯಲ್ಲಿಯೇ ಅಧಿಕಾರ ಸ್ವೀಕಾರ ಸಮಾರಂಭವನ್ನು ಆಯೋಜಿಸಿದ್ದೇವೆ. ನಿಕಟಪೂರ್ವ ಅಧ್ಯಕ್ಷ ಚೈತನ್ಯ ಕುಲಕರ್ಣಿ, ರಾಯ್ಕರ್ ಅವರಿಗೆ ಅಧಿಕಾರ ಹಸ್ತಾಂತರ ಮಾಡುವರು ಎಂದರು.

ಕ್ರೆಡೈ ಹುಬ್ಬಳ್ಳಿ-ಧಾರವಾಡ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಂಜಯ ಕೊಠಾರಿ ಇದೇ ವೇಳೆ ಅಧಿಕಾರ ಸ್ವೀಕರಿಸುವರು. ಕ್ರೆಡೈನ ನಿಕಟಪೂರ್ವ ರಾಷ್ಟ್ರೀಯ ಅಧ್ಯಕ್ಷ ಇರ್ಫಾನ್ ರಜಾಕ್, ಸುನಿಲ ಮಂತ್ರಿ, ರಮಾಣಿ ಶಾಸ್ತ್ರಿ, ಶ್ರೀಧರನ್ ಸ್ವಾಮಿನಾಥನ್ ಸೇರಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಮಹತ್ತರ ಸಾಧನೆ ಮಾಡಿದವರು ಪಾಲ್ಗೊಳ್ಳುವರು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕ್ರೆಡೈ ಹು-ಧಾ ಅಧ್ಯಕ್ಷ ಸಾಜೀದ್ ಫರಾಸ್, ನಿಯೋಜಿತ ಅಧ್ಯಕ್ಷ ಸಂಜಯ ಕೋಠಾರಿ, ಜಂಟಿ ಕಾರ್ಯದರ್ಶಿ ಸತೀಶ ಮುನವಳ್ಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net