ಹುದ್ದೆಯಿಂದ ವಜಾಗೊಳಿಸಿರಬಹುದು ಪಕ್ಷದಿಂದಲ್ಲ; ನಾವು ಈಗಲೂ ಬಿಜೆಪಿಗರೇ: ನಮೋ ವೇದಿಕ ಅಧ್ಯಕ್ಷ ಪಾಣಿ ರಾಜಪ್ಪ

SOR WEB
Published on

ಸೊರಬ: ನಮೋ ವೇದಿಕೆಯಲ್ಲಿ ಗುರುತಿಸಿಕೊಂಡ ಅನೇಕರನ್ನು ಪಕ್ಷದ ಹುದ್ದೆಯಿಂದ ವಜಾ ಮಾಡಿರಬಹುದು, ಆದರೆ ಪಕ್ಷದಿಂದಲ್ಲ. ಈಗಲೂ ನಾವು ಮೂಲ ಬಿಜೆಪಿಗರೇ ಎಂದು ನಮೋ ವೇದಿಕೆ ಅಧ್ಯಕ್ಷ ಪಾಣಿ ರಾಜಪ್ಪ ಹೇಳಿದರು.

ಗುರುವಾರ ಪಟ್ಟಣದ ನಮೋ ವೇದಿಕೆಯ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಶಾಸಕ ಕುಮಾರ್ ಬಂಗಾರಪ್ಪ ಕಾರ್ಯವೈಖರಿ ಬಗ್ಗೆ ಅಸಮಾಧಾನ ಇದೆ. ಶಾಸಕರ ಹಠಾವೋ ಬಿಜೆಪಿ ಬಚಾವೋ ಎಂಬ ಘೋಷಣೆದೊಂದಿಗೆ ಪ್ರತಿ ಬೂತ್ ಮಟ್ಟದಲ್ಲಿ ನಮೋ ವೇದಿಕೆ ಸಂಘಟಿಸಲಾಗುತ್ತಿದೆ. ನಮೋ ವೇದಿಕೆಯನ್ನು ಹಣದಿಂದ ಸಂಘಟನೆ ಮಾಡುತ್ತಿಲ್ಲ. ಇಲ್ಲಿರುವ ಯಾರೊಬ್ಬರ ಬಳಿಯೂ ಹಣವಿಲ್ಲ. ಎಲ್ಲರ ಸಹಕಾರದಿಂದ ನಮೋ ವೇದಿಕೆಯನ್ನು ಉತ್ತಮವಾಗಿ ಸಂಘಟಿಸಲಾಗುತ್ತಿದೆ ಎಂದರು.

ಸೊರಬದಲ್ಲಿ ಆಯೋಜಿಸಿದ್ದ ನಮೋ ವೇದಿಕೆ ಕಾರ್ಯಕ್ರಮಕ್ಕೆ ಬಿಜೆಪಿ ಕಾರ್ಯಕರ್ತರು ತೆರಳದಂತೆ ಕೆಲವರು ಮಾಧ್ಯಮದ ಮೂಲಕ ಹೇಳಿಕೆ ನೀಡಿದ್ದರು. ಆದರೆ, ನಿರೀಕ್ಷೆಗೂ ಮೀರಿ ಹೆಚ್ಚಿನ ಸಂಖ್ಯೆಯಲ್ಲಿ ನಮೋ ಅಭಿಮಾನಿಗಳು ಆಗಮಿಸಿದ್ದರು. ಆನವಟ್ಟಿಯಲ್ಲಿ ನಡೆದ ಜನ ಸಂಕಲ್ಪಯಾತ್ರೆಗೆ ನಮೋ ಕಾರ್ಯಕರ್ತರು ಸ್ವಇಚ್ಛೆಯಿಂದಲೇ ತೆರಳಲಿಲ್ಲ. ಇಲ್ಲಿ ಯಾರಿಗೂ ಕಾರ್ಯಕ್ರಮಕ್ಕೆ ಹೋಗಬೇಡಿ ಎಂದು ತಿಳಿಸಿರಲಿಲ್ಲ. ನಮೋ ವೇದಿಕೆಯ ಮುಖಂಡರು ತೆರಳುತ್ತಿಲ್ಲ ಎಂದಾದರೆ, ನಾವೇಕೆ ಹೋಗಬೇಕು ಎಂದು ತೀರ್ಮಾನಿಸಿದರು. ಇದರಿಂದ 30 ಸಾವಿರ ಜನ ಆಗಮಿಸಲಿದ್ದಾರೆ ಎಂದು ಹೇಳಿಕೆ ನೀಡುವ ಮೂಲಕ ಕಾರ್ಯಕ್ರಮದ ಮುಂಚೂಣಿ ವಹಿಸಿದ್ದ ಶಾಸಕರಿಗೆ ತಕ್ಕ ಉತ್ತರ ಲಭಿಸಿದೆ. ಬಂದ ಸಂಖ್ಯೆ ಎಷ್ಟು ಎಂಬುದು ಬಹಿರಂಗಗೊಂಡಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net