

ಕಂಪ್ಲಿ: ಪದವಿ ಓದುವ ದಿನಗಳಲ್ಲೇ ಉದ್ಯೋಗಕ್ಕಾಗಿ ಸೂಕ್ತ ವೃತ್ತಿ ಮಾರ್ಗದರ್ಶನ ಪಡೆಯಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಶ್ರೀನಿವಾಸ ರೆಡ್ಡಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಮತ್ತು ಪ್ಲೇಸ್‌ಮೆಂಟ್ ಸೆಲ್‌ನಿಂದ ಆಯೋಜಿಸಿದ್ದ ವೃತ್ತಿ ಮಾರ್ಗದರ್ಶನ ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು. ವೃತ್ತಿ ಮಾರ್ಗದರ್ಶನದಿಂದ ಭವಿಷ್ಯದ ವೃತ್ತಿ ಆಯ್ಕೆ, ಜೀವನದ ದಿಕ್ಕು ದಿಸೆಗೆ ಸಹಾಯಕವಾಗುತ್ತದೆ. ಅಂಕ ಗಳಿಕೆಯೊಂದಿಗೆ ಅರ್ಹ ಹುದ್ದೆ ಗಳಿಕೆಗೆ ತಕ್ಕ ಆಸಕ್ತಿ, ನೈಪುಣ್ಯ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಕೆಯ ಕೌಶಲ ಅರಿತುಕೊಳ್ಳಬೇಕು ಎಂದರು.
ತುಮಕೂರಿನ ಸಂಪನ್ಮೂಲ ವ್ಯಕ್ತಿ ಕೆ.ವಿ.ರಾಜೇಶ್ ಪದವಿ ನಂತರದ ಉದ್ಯೋಗಗಳಿಗೆ ಸಂಬಂಧಿಸಿದಂತೆ ಮಾರ್ಗದರ್ಶನ ನೀಡಿದರು. ಸಹಾಯಕ ಪ್ರಾಧ್ಯಾಪಕರಾದ ಡಾ.ಅನ್ನಪೂರ್ಣ ಗುಡದೂರು, ಎಂ.ಪಿ.ಬಾಲಾಜಿ, ಡಾ.ಚಂದ್ರಶೇಖರ ವಿ.ಬಿಳೆಗುಡ್ಡ, ಡಾ.ಕೆ.ಮಹೇಶ, ರಾಜ್ಮಾ ಟಿಎಂಆರ್, ಖಲೀಲ್, ಗ್ರಂಥಪಾಲಕ ಎ.ಜಿ.ವೀರಭದ್ರಪ್ಪ ಇತರರಿದ್ದರು.