

ಹನೂರು: ಹನೂರು ಶೈಕ್ಷಣಿಕ ವಲಯದ ಹುತ್ತೂರು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ದೈಹಿಕ ಶಿಕ್ಷಣ ಶಿಕ್ಷಕ ಆರ್.ಗಿರಿನಾಯಕ್, ಇಂಗ್ಲಿಷ್ ಭಾಷಾ ಶಿಕ್ಷಕ ಪಿ.ಮದಲೈಸ್ವಾಮಿ, ಸಮಾಜ ವಿಜ್ಞಾನ ಶಿಕ್ಷಕ ಜಿ.ವೆಂಕಟೇಶ್ ಹಾಗೂ ಸಂಸ್ಕೃತ ಶಿಕ್ಷಕ ಆರ್. ವಿಜಯಕುಮಾರ್ ಅವರನ್ನು ಶುಕ್ರವಾರ ಸನ್ಮಾನಿಸಿ ಬೀಳ್ಕೊಡಲಾಯಿತು.
ಬೈಲೂರು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಚುಂಚಯ್ಯ, ಶಿಕ್ಷಕ ವೆಂಕಟೇಶ್, ಹುತ್ತೂರು ಶಾಲೆ ಮುಖ್ಯ ಶಿಕ್ಷಕ ಸಿ.ಮಾದೇಶ್, ಶಿಕ್ಷಕರಾದ ಎಂ.ಸಿ ಚಂದ್ರಶೇಖರ, ಕೆ.ನಟರಾಜು, ಶಿವಮ್ಮ ಹಾಗೂ ವಿದ್ಯಾರ್ಥಿಗಳು ಇದ್ದರು.