ಹುತ್ತಕ್ಕೆ ಎರೆದು ವ್ಯರ್ಥವಾಗಿಸದೆ ಅಪೌಷ್ಟಿಕ ಮಕ್ಕಳಿಗೆ ಹಾಲು ಕೊಡಿ

21 ard 4
ಬಸವ ಪಂಚಮಿ ನಿಮಿತ್ಯ ಸೋಮವಾರ ಔರಾದ್‌ನಲ್ಲಿ ಗುಡಿಸಲು ವಾಸಿ ಮಕ್ಕಳಿಗೆ ಹಾಲು ವಿತರಿಸಲಾಯಿತು. ಮುಖಂಡ ಬಂಡೆಪ್ಪ ಕಂಟೆ, ಸುನೀಲ್ ಜಿರೋಬೆ, ಬಂಟಿ ದರ್ಬಾರೆ, ಸುನೀಲ್ ಮಿತ್ರಾ, ಭೀಮರಾವ್, ವಿವೇಕ ನಿರ್ಮಳೆ, ಬಾಲಾಜಿ ದಾಮಾ, ಬಾಲಾಜಿ ಮಿತಬಾ, ಶಾದುಲ್ ಬಾಗವಾನ್, ಅಜಯ ವರ್ಮಾ, ಗೌತಮ, ಮಸಣಜಿ ಇದ್ದರು.
Published on

ಔರಾದ್: ನಾಗರ ಪಂಚಮಿ ದಿನ ಹುತ್ತಕ್ಕೆ ಹಾಲೆರೆದು ವ್ಯರ್ಥವಾಗಿಸುವ ಬದಲು ಪ್ರತಿಯೊಬ್ಬರೂ ಚಿಂತಿಸಿ ಅಪೌಷ್ಟಿಕದಿಂದ ಬಳಲುತ್ತಿರುವ ಮಕ್ಕಳಿಗೆ ಕೊಟ್ಟರೆ ಅಮೃತವಾಗುತ್ತದೆ ಎಂದು ಮುಖಂಡ ಬಂಡೆಪ್ಪ ಕಂಟೆ ಹೇಳಿದರು.

ಪಟ್ಟಣದಲ್ಲಿ ಬೀದರ್ ಜಿಲ್ಲಾ ವಿದ್ಯಾರ್ಥಿ ಬಂಧುತ್ವ ವೇದಿಕೆ, ಸುಭಾಷಚಂದ್ರ ಬೋಸ್ ಯುವಕ ಸಂಘದಿಂದ ಸೋಮವಾರ ಗುಡಿಸಲು ವಾಸಿಗಳಿಗೆ ಹಾಲು ವಿತರಿಸಿ ಮಾತನಾಡಿದ ಅವರು, ನಾಗರಪಂಚಮಿ ದಿನ ಲಕ್ಷಾಂತರ ಲೀಟರ್ ಹಾಲು ಪೋಲಾಗುತ್ತಿದೆ ಸರಿಯಲ್ಲ. ಹಾಲು ಬಡ, ನಿರ್ಗತಿಕ ಮಕ್ಕಳಿಗೆ ನೀಡಿದರೆ ಆರೋಗ್ಯ ವೃದ್ಧಿಗೆ ಅನುಕೂಲವಾಗುತ್ತದೆ ಎಂದರು.

ಸುನೀಲ್ ಜಿರೋಬೆ, ಬಂಟಿ ದರ್ಬಾರೆ, ಸುನೀಲ್ ಮಿತ್ರಾ, ಭೀಮರಾವ್, ವಿವೇಕ ನಿರ್ಮಳೆ, ಬಾಲಾಜಿ ದಾಮಾ, ಬಾಲಾಜಿ ಮಿತಬಾ, ಶಾದುಲ್ ಬಾಗವಾನ್, ಅಜಯ ವರ್ಮಾ, ಗೌತಮ, ಮಸಣಜಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net