ಹುತಾತ್ಮರ ಸ್ಮರಣೆ ಅತ್ಯಗತ್ಯ- ಬಸವಪ್ರಭು ಸ್ವಾಮೀಜಿ

dvg-basava.jpg
Published on

ದಾವಣಗೆರೆ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿನೂತನ ಮಹಿಳಾ ಸಮಾಜದ ಸಹಯೋಗದಲ್ಲಿ ಸ್ವಾತಂತ್ರ್ಯ ದಿನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಗರದ ಕುವೆಂಪು ಭವನದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿ ಅನೇಕ ಹೋರಾಟಗಾರರ ಸ್ಮರಣೆ ಅತ್ಯಗತ್ಯ ಎಂದರಲ್ಲದೆ ಭಾರತ ಇಂದು ವಿಶ್ವ ಮಟ್ಟದಲ್ಲಿ ವಿಶೇಷ ಮನ್ನಣೆ ಪಡೆದಿದೆ ಎಂದರು.

ನಿವೃತ್ತ ಯೋಧ ಕಲ್ಯಾಣ್‌ಕುಮಾರ್, ಪ್ರಕಾಶ್‌ರೆಡ್ಡಿ ಬೇತೂರು, ಪತ್ರಕರ್ತ ಇ.ಎಂ.ಮಂಜುನಾಥ್ ಅವರನ್ನು ವಿನೂತನ ಮಹಿಳಾ ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಸಮಾಜದ ಅಧ್ಯಕ್ಷೆ ಚಂದ್ರಿಕಾ ಮಂಜುನಾಥ್, ದವನ ಕಾಲೇಜಿನ ಉಪನ್ಯಾಸಕಿ ರಶ್ಮಿ ಎಂ. ಶ್ರೀಕಾಂತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಇದ್ದರು.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net