ಹುತಾತ್ಮ ಯೋಧರ ಕುಟುಂಬಕ್ಕೆ ನೆರವು

gift
soldier
Published on

ಹೊಸಕೋಟೆ: ದೇಶಕ್ಕಾಗಿ ಹೋರಾಟ ನಡೆಸಿ ವೀರ ಮರಣವನ್ನಪ್ಪಿದ ಹುತಾತ್ಮ ಯೋಧರ ಕುಟುಂಬಕ್ಕೆ ಸೇವೆ ಮಾಡಿದ ಸಾರ್ಥಕತೆ ಭಾವ ಮೂಡಿದೆ ಎಂದು ವಹ್ನೀಕುಲ ಕ್ಷತ್ರಿಯ ತಿಗಳ ಸಂಘದ ಅಧ್ಯಕ್ಷ ಡಾ.ಸಿ.ಜಯರಾಜ್ ಹೇಳಿದರು.
ಪಟ್ಟಣದಲ್ಲಿ ಹುತಾತ್ಮ ವೀರ ಯೋಧ ಅಮೀರ್ ಮೀಯ ಅವರ ಕುಟುಂಬದವರಿಗೆ ಒಂದು ಲಕ್ಷ ರೂ.ಹಣ ವಿತರಿಸಿ ಮಾತನಾಡಿದರು.
1971ರಲ್ಲಿ ನಡೆದ ಭಾರತ -ಪಾಕಿಸ್ತಾನ ಯುದ್ಧದಲ್ಲಿ ಶತ್ರುಗಳ ಗುಂಡೇಟಿಗೆ ಎದೆಯೊಡ್ಡಿ ವೀರ ಮರಣವನ್ನಪ್ಪಿದ ಯೋಧ ಅಮೀರ್ ಮೀಯ ಅವರ ದೇಶ ಸೇವೆ ಸ್ಮರಿಸಿದರು. ಯೋಧರ ಕುಟುಂಬಕ್ಕೆ ನೆರವಿನ ಹಸ್ತ ಚಾಚಲು ಕುಟುಂಬವನ್ನು ಗುರುತಿಸಿಕೊಟ್ಟ ಸೂಲಿಬೆಲೆ ಚಕ್ರವರ್ತಿ ಅವರಿಗೆ ಅಭಾರಿ ಎಂದರು. ಜಯರಾಜ್ ಕುಟುಂಬದ ಸದಸ್ಯರು, ಹುತಾತ್ಮ ಯೋಧ ಅಮೀರ್ ಮೀಯಾ ಕುಟುಂಬದ ಸದಸ್ಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net