

ಚಾಮರಾಜನಗರ: ನವಲಗುಂದ-ನರಗುಂದ ಹೋರಾಟದಲ್ಲಿ ಹುತಾತ್ಮರಾದ ರೈತರ ಸ್ಮರಣೆ ಕಾರ್ಯಕ್ರಮ ನಡೆಯಿತು.
ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ಹುತಾತ್ಮರರಾದ ರೈತರನ್ನು ಸ್ಮರಣೆ ಮಾಡಿದರು. ಜಿಲಾಧ್ಯಕ್ಷ ಹೊನ್ನೂರು ಪ್ರಕಾಶ್, ಕಡಬೂರು ಮಂಜು, ವಿಜಯ್ ಕುಮಾರ್, ಅಂಬಳೆ ಕುಮಾರ್, ಚಗಂಡಿ ಕರಿಯಪ್ಪ, ರಾಘು ಕಲ್ಪುರ, ಮಹದೇವಪ್ಪ ಇದ್ದರು.