ಹುಣ್ಣಿಮೆ ಕಾರ್ಯಕ್ರಮದ ಅಂಗವಾಗಿ ಶ್ರೀ ಆದಿ ಚುಂಚನಗಿರಿ ಮಠದಲ್ಲಿ ಆಧ್ಯಾತ್ಮ ಚಿಂತನ ಶಿಬಿರ

Adichunchanagiri
Published on

ಹಾಸನ: ನಗರದ ಶ್ರೀ ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠವು, ಯುಗಯೋಗಿ, ಪರಮಪೂಜ್ಯ ಜಗದ್ಗುರು ಪದ್ಮಭೂಷಣ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಸಂಸ್ಮರಣಾರ್ಥ ಹಲವು ವರ್ಷಗಳಿಂದ ಪ್ರತಿ ತಿಂಗಳ ಹುಣ್ಣಿಮೆ ದಿನದಂದು ನಡೆಸಿಕೊಂಡು ಬರುತ್ತಿರುವ ಗುರುತೋರಿದ ದಾರಿ, ತಿಂಗಳ ಮಾಮನ ತೇರು, 128ನೇ ಕಾರ್ಯಕ್ರಮದ ಪ್ರಯುಕ್ತ ಮೇ 5ರಿಂದ 12 ವರೆಗೆ ಆಧ್ಯಾತ್ಮಿಕ ಚಿಂತನ ಶಿಬಿರ ಹಮ್ಮಿಕೊಳ್ಳಲಾಗಿದೆ.

ಪರಮಪೂಜ್ಯ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಕೃಪಾಶೀರ್ವಾದದೊಂದಿಗೆ, ಶ್ರೀ ಶಂಭುನಾಥ ಸ್ವಾಮಿಗಳ ಸಾನಿಧ್ಯದಲ್ಲಿ ಶ್ರೀಮಠದ ಮಹಾ ಗಣಪತಿ ನವನಾಥ ಯಾಗ ಮಂಟಪದಲ್ಲಿ ಪ್ರತಿದಿನ ಬೆಳಗ್ಗೆ 7 ರಿಂದ 8 ಗಂಟೆವರೆಗೆ ಬಾಗಲ ಕೋಟೆಯ ಮಹಲಿಂಗಪುರದ ಶ್ರೀ ಸಿದ್ಧಾರೂಢ ಬ್ರಹ್ಮ ವಿದ್ಯಾಶ್ರಮದ ಪೂಜ್ಯ ಸದ್ಗುರು ಶ್ರೀ ಶ್ರೀ ಸಹಜಾನಂದ ಸ್ವಾಮಿಗಳು ಶ್ರೀಮನ್ನಿಜಗುಣಶಿವ ಯೋಗಿಗಳಿಂದ ವಿರಚಿಸಲ್ಪಟ್ಟ ಕೈವಲ್ಯ ಪದ್ಧತಿ ನೀತಿ ಕ್ರಿಯಾಚರ್ಯ ಸ್ಥಲ ವಿಷಯವಾಗಿ ಉಪನ್ಯಾಸ ನೀಡುವರು. ಸಂಜೆ 6 ರಿಂದ 7ಗಂಟೆವರೆಗೆ ಇದೇ ವಿಷಯ ಕುರಿತು ಮಹಾರಾಷ್ಟ್ರದ ಸಂಸ್ಕೃತ ವಿದ್ಯಾ ಸಾಹಿತ್ಯ ಪ್ರವೀಣರಾದ ವಿದ್ವಾನ್ ಶ್ರೀ ರಾಮಚಂದ್ರ ಶಾಸ್ತ್ರಿಗಳು ಉಪನ್ಯಾಸ ನೀಡುವರು.

ಕಾರ್ಯಕ್ರಮಕ್ಕೆ ಸಾರ್ವಜನಿಕರು, ಶ್ರೀಮಠದ ಭಕ್ತರು ಹಾಗೂ ಪರಮಪೂಜ್ಯರ ಅಭಿಮಾನಿಗಳು ಆಗಮಿಸಿ ಯಶಸ್ವಿಗೊಳಿಸುವಂತೆ ಶ್ರೀಮಠದ ಪ್ರಕಟಣೆ ಮೂಲಕ ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net