

ಹುಣಸೂರು: ಸೆಸ್ಕ್ ಮತ್ತು ಕೆಪಿಟಿಸಿಎಲ್ ವತಿಯಿಂದ ಆಯೋಜಿಸಿದ್ದ ಹುಣಸೂರು ಡಿವಿಜನ್ ಕ್ರಿಕೆಟ್ ಕಪ್-2023ನ ಮೂರನೇ ಅವೃತ್ತಿಯ ಚಾಂಪಿಯನ್ ಆಗಿ ಹುಣಸೂರು ಹಂಟರ್ಸ್ ತಂಡ ಹೊರಹೊಮ್ಮಿತು.
ನಗರಸಭಾ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಹುಣಸೂರು ಹಂಟರ್ಸ್ ತಂಡ ಎಚ್.ಡಿ.ಕೋಟೆ ವನಸಿರಿ ತಂಡವನ್ನು ಸೋಲಿಸಿ ಟ್ರೋಫಿಯನ್ನು ದಕ್ಕಿಸಿಕೊಂಡಿತು. ಟೂರ್ನಿಯಲ್ಲಿ ಎಚ್.ಡಿ. ಕೋಟೆ, ಸರಗೂರು, ಬಿಳಿಕೆರೆ ಹಾಗೂ ಹುಣಸೂರು ಭಾಗಗಳಿಂದ 14 ತಂಡಗಳು ಭಾಗವಹಿಸಿದ್ದವು.
ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿ ಹುಣಸೂರು ಹಂಟರ್ಸ್ ತಂಡದ ಪ್ರಸನ್ನ, ಬೆಸ್ಟ್ ಬೌಲರ್ ಆಗಿ ಎಚ್.ಡಿ. ಕೋಟೆ ವನಸಿರಿ ತಂಡದ ಆನಂದ್ ಮತ್ತು ಬೆಸ್ಟ್ ಆಲ್ ರೌಂಡರ್ ಆಗಿ ಹುಣಸೂರು ಹಂಟರ್ಸ್ ತಂಡದ ರಾಜು ಪ್ರಶಸ್ತಿಗೆ ಭಾಜನರಾದರು. ಆಸ್ಟ್ರೇಲಿಯ ಕ್ರಿಕೆಟ್ ಬೋರ್ಡ್‌ನ ಕಾಮೆಂಟರ್ ಡೈಮನ್ ಪಂದ್ಯಾವಳಿಯಲ್ಲಿ ಭಾಗವಹಿಸಿ, ಕೆಲಕಾಲ ಕಾಮೆಂಟರಿ ಮಾಡಿ ಕ್ರೀಡಾ ಪ್ರೇಮಿಗಳನ್ನು ರಂಜಿಸಿದರು.
ಸೆಸ್ಕ್ ಮೈಸೂರು ವೃತ್ತದ ಅಧೀಕ್ಷಕ ಇಂಜಿನಿಯರ್ ನಾಗೇಶ್ ಪಂದ್ಯಾವಳಿ ಉದ್ಘಾಟಿಸಿದರು. ಹುಣಸೂರಿನ ಕಾರ್ಯನಿರ್ವಾಹಕ ಇಂಜಿನಿಯರ್ ಮಹೇಶ್, ಹುಣಸೂರು ಉಪವಿಭಾಗದ ಸಿದ್ದಪ್ಪ, ಎಇ ಚನ್ನಕೇಶವ, ಸೋಮಶೇಖರ್, ಕೃಷ್ಣಕುಮಾರ್, ಶಿವಕುಮಾರ್, ಸಿದ್ದೇಶ್, ಶೇಖರ್, ರಾಹುಲ್ ಚೌಗಲಾ, ಶಾಂತರಾಜು, ದೇವೇಂದ್ರ, ಜಗದೀಶ್, ಕೆ.ಎಸ್.ಮಂಜುನಾಥ್, ನಿರಂಜನ್ ಇತರರು ಭಾಗವಹಿಸಿದ್ದರು.